ಮುಕ್ಕೂರು : ದಶ ವರ್ಷದ ಹೊಸ್ತಿಲಿನಲ್ಲಿರುವ ಮುಕ್ಕೂರು ನೇಸರ ಯುವಕ ಮಂಡಲವೂ ನ.9 ರಂದು ಮುಕ್ಕೂರು ವಠಾರದಲ್ಲಿ ಹಮ್ಮಿಕೊಂಡಿರುವ ಪುರುಷರ ವಿಭಾಗದ ಲೆವೆಲ್, ಸಿಂಗಲ್ ಗ್ರಿಪ್ ಹಗ್ಗಜಗ್ಗಾಟ ಹಾಗೂ ಗ್ರಾಮ ಗ್ರಾಮಗಳ ವಾಲಿ ಬಾಲ್ ಪಂದ್ಯಾಟವನ್ನು ಮಾಜಿ ಸಂಸದ, ನೇಸರ ದಶ ಪ್ರಣತಿ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕುಂಜಾಡಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ದಶ ವರ್ಷದ ಸಾಧನೆ ತಿಳಿಸುವ ನೇಸರ ಯಶೋಗಾಥೆಯನ್ನು ವೀಕ್ಷಿಸಿದ ಮಾಜಿ ಸಂಸದರು ಕಳೆದ ಒಂಭತ್ತು ವರ್ಷಗಳಲ್ಲಿ 55 ಕ್ಮೂ ಅಧಿಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡ ನೇಸರ ಯುವಕ ಮಂಡಲದ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು. ಸಮಾಜಮುಖಿ ಚಿಂತನೆಯ ಕಾರ್ಯಗಳ ಅಗತ್ಯೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲ ಗೌರವಾಧ್ಯಕ್ಷ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಸಾಮಾಜಿಕ ಮುಂದಾಳುಗಳಾದ ಪ್ರಸನ್ನ ಮಾರ್ಥ, ಶ್ರೀನಾಥ್ ರೈ ಬಾಳಿಲ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಜಯಂತ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ರವಿ ಕುಂಡಡ್ಕ ಉಪಸ್ಥಿತರಿದ್ದರು.




























