ಪುತ್ತೂರು : ಚಿಕ್ಕಮುಡ್ನೂರು ವಾರ್ಡ್ 7 ರ 4ನೇ ಟಾಸ್ಕ್ ಫೋರ್ಸ್ ಸಭೆಯು ನಗರಸಭಾ ಕಮೀಷನರ್ ಮಧು ಮನೋಹರ್ ಅಧ್ಯಕ್ಷತೆಯಲ್ಲಿ ಮತ್ತು ನಗರಸಭಾ ಸದಸ್ಯೆ ಶ್ರೀಮತಿ ಲೀಲಾವತಿಯವರ ನೇತೃತ್ವದಲ್ಲಿ ಕೃಷ್ಣ ನಗರ ಶಾಲೆಯಲ್ಲಿ ಜೂ.23 ರಂದು ನಡೆಯಿತು.
ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವಂತೆ, ಡೆಂಗ್ಯೂ ಮಲೇರಿಯ ಹರಡದಂತೆ ಜಾಗೃತಿ ಮೂಡಿಸುವ ಬಗ್ಗೆ ಕಮೀಷನರ್ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ತುಳಸಿ ಮತ್ತು ನಗರಸಭೆಯ ಪುರುಷೋತ್ತಮ್ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸೀತಾರತ್ನ, ನಗರಸಭಾ ಮಾಜಿ ಸದಸ್ಯ ಉದಯ ಆಚಾರ್ಯ, ವೇಣುಗೋಪಾಲ್, ಪ್ರಶಾಂತ್ ಕೃಷ್ಣ ನಗರ, ಪ್ರಶಾಂತ್ ಕೆಮ್ಮಾಯಿ, ಪುಷ್ಪರಾಜ್, ರವಿ ಆಚಾರ್ಯ ಸಭೆಯಲ್ಲಿ ಉಪಸ್ಥಿತರಿದ್ದರು.