ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ರವರ ಆದೇಶದ ಮೇರೆಗೆ ದ.ಕ ಜಿಲ್ಲಾ ಪಂಚಾಯತ್ ನ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ‘ಜಲ ಜೀವನ್ ಮಿಷನ್'(ಮನೆ ಮನೆಗೆ ಗಂಗೆ) ಯೋಜನೆಯಲ್ಲಿ ಸುಮಾರು 96.81 ಲಕ್ಷ ಅನುದಾನದಡಿಯಲ್ಲಿ ಕುಂಟುಕುದೇಲು ಪ್ರದೇಶದಲ್ಲಿ 15.41 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಟ್ಯಾಂಕ್, ಪೈಪ್ ಲೈನ್ ಹಾಗೂ ಸಂಪುಗೆ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಯವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ ಬಲಿಪ ಗುಳ,ಉಪಾಧ್ಯಕ್ಷರಾದ ನಾಗೇಶ್ ಕೊಡಂಗಾಯಿ,ನಿಕಟ ಪೂರ್ವ ಅಧ್ಯಕ್ಷರಾದ ರವೀಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಯಂತ್ ಪೂಜಾರಿ, ಜಯಲಕ್ಷ್ಮಿ, ಪ್ರೇಮಲತಾ, ಹರಿ ಕಿಶೋರ್, ರೇಖಾ, ಜಯಭಾರತಿ, ಅರ್ಪದ್, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ರಾಧಾಕೃಷ್ಣ ಗೌಡ, ಮಾಜಿ ಪಂಚಾಯತ್ ಸದಸ್ಯರಾದ ತಮ್ಮಯ್ಯ ಗೌಡ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ರೈತರ ಮೋರ್ಚಾದ ಉಪಾಧ್ಯಕ್ಷರಾದ ಅರವಿಂದ ರೈ, ಈಶ್ವರ ಭಟ್ ಪೂರ್ಲಿಪ್ಪಾಡಿ, ಬೂತ್ ಅಧ್ಯಕ್ಷರಾದ ವಿಜಯ್, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.