ಮಂಗಳೂರಿನ ಹಂಪನಕಟ್ಟೆ ಗಣಪತಿ ಶಾಲೆಯ ಬಳಿಯ ಶ್ರೀನಿವಾಸ್ ಹೋಟೆಲ್ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸಂಪೂರ್ಣ ಕುಸಿಯುವ ಭೀತಿ ವ್ಯಕ್ತವಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಡಿದೆ.
ರಾತ್ರಿ ವೇಳೆಗೆ ಮಳೆ ಅಬ್ಬರ ಹೆಚ್ಚಾದರೆ ಕಟ್ಟಡ ಸಂಪೂರ್ಣ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಸ್ತೆಯನ್ನು ಬಂದ್ ಮಾಡಿದ್ದಾರೆ. ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದೆಲ್ಲ ವದಂತಿ ಹರಡಿದೆ.
ಶ್ರೀನಿವಾಸ್ ಹೋಟೆಲ್ ಕಟ್ಟಡದಲ್ಲಿ ಲಾಡ್ಜ್ ಹಾಗೂ ಹೋಟೆಲ್ ಇದ್ದು ಬಹುಮಹಡಿಯ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾಯ ಎದುರಾಗಿದೆ ಎಂದೆಲ್ಲ ಸುದ್ದಿಯಾಗುತ್ತಿದೆ.
ಆದರೆ ಈ ಗಾಳಿ ಸುದ್ದಿ ಮಿಂಚಿನಂತೆ ಹರಿದಾಡಿದ್ದು, ಇಂತಹ ಯಾವುದೇ ಅಪಾಯ ಇಲ್ಲ ಎಂದು ಪೋಲಿಸರೇ ಸ್ಪಷ್ಟಪಡಿಸಿದ್ದಾರೆ. ಇದೊಂದು ಕೇವಲ ವದಂತಿ ಅಷ್ಟೇ ಎಂಬ ಮನವರಿಕೆ ಮಾಡುವುದು ಕಷ್ಟಸಾಧ್ಯವಾಗಿದೆ.