ರಾಮಕುಂಜ: ಆತೂರು ಪೊಲೀಸ್ ಚೆಕ್ ಪಾಯಿಂಟ್‌ನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಟೆಂಪೋವೊಂದು ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೂ.29ರಂದು ಮಧ್ಯಾಹ್ನ ನಡೆದಿದೆ.
ದ್ವಿಚಕ್ರ ಸವಾರರೊಬ್ಬರು ಚೆಕ್‌ಪಾಯಿಂಟ್‌ನಲ್ಲಿ ಪೊಲೀಸರಿಗೆ ದಾಖಲೆ ತೋರಿಸಿ ಮತ್ತೆ ತನ್ನ ದ್ವಿಚಕ್ರ ವಾಹನದ ಕಡೆ ಬರುತ್ತಿದ್ದಂತೆ ಅವರಿಗೆ ಟೆಂಪೊವೊಂದು ಡಿಕ್ಕಿಯಾಗಿದೆ. ಘಟನೆಯಲ್ಲಿ ದ್ವಿಚಕ್ರ ಸವಾರ ಆತೂರು ಬೈಲು ಪುತ್ತು ಮೋನು ಎಂಬವರ ಪುತ್ರ ಎಪಿ ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರ ವಿರುದ್ದ ತಿರುಗಿ ಬಿದ್ದಿದ್ದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ ಬ್ಯಾರಿಕೇಡ್ ಹಾಗೂ ಪೊಲೀಸರು ನಿಲ್ಲುವ ಶೆಡ್ ಧ್ವಂಸಗೊಳಿಸಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹ್ಯಾರಿಸ್ ರವರು ಸುಮಾರು 10 ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿ ಇದ್ದು,ಎರಡು ತಿಂಗಳ ಮುಂಚೆ ಊರಿಗೆ ಬಂದಿದ್ದರು. ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ಗ್ರೂಪಿನ ಸಕ್ರೀಯ ಸದಸ್ಯರಾಗಿದ್ದರು.