ಪುತ್ತೂರು: ಎರಡು ಪ್ರತ್ಯೇಕ ಕಡೆಗಳಲ್ಲಿ ಸಿಕ್ಕಿದ ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ಅದಕ್ಕೆ ಕೃತಕ ಕಾವು ನೀಡಿ ಎಲ್ಲಾ ಮರಿಗಳನ್ನು ರಕ್ಷಣೆ ಮಾಡಿದ ಉರಗ ಪ್ರಿಯ ಬನ್ನೂರಿನ ತೇಜಸ್ ಅವರು ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರಣ್ಯಕ್ಕೆ ಬಿಟ್ಟ ಘಟನೆ ಜೂ.27ರಂದು ನಡೆದಿದೆ.
ಸವಣೂರಿನಲ್ಲಿ 16 ಹೆಬ್ಬಾವಿನ ಮೊಟ್ಟೆಗಳನ್ನು ಮತ್ತು ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪ್ರಮೋದ್ ಅವರ ಮಾಹಿತಿಯಂತೆ ಪುತ್ತೂರಿನ ಪರಿಸರದಲ್ಲಿ 22 ಹೆಬ್ಬಾವಿನ ಮೊಟ್ಟೆಗಳನ್ನು ಬನ್ನೂರು ಕರ್ಮಲ ನಿವಾಸಿ ತೇಜಸ್ ಅವರು ಫಾರೆಸ್ಟ್ ಗಾರ್ಡ್ ಸತ್ಯ ಡಿಜೆ ಮತ್ತು ಪ್ರೀತಮ್ ಜೊತೆಯಲ್ಲಿ ಒಟ್ಟು 38 ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದರು.
38 ಮೊಟ್ಟೆಗಳಿಗೂ ಕೃತಕ ಕಾವು ಕೊಡುವ ಮೂಲಕ 38 ಮರಿಗಳು ಮೊಟ್ಟೆಗಳಿಂದ ಹೊರ ಬಂದಿತ್ತು. ಜೂ. 27ರಂದು ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ ಆಚಾರ್ಯ, ಶೇಖರ್. ವಲಯ ಅರಣ್ಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಪುನೀತ್ ಮತ್ತು ತೇಜಸ್ ಅವರು ಮರಿಗಳನ್ನು ಅರಣ್ಯಕ್ಕೆ ಬಿಟ್ಟರು.