ಮುಂಡೂರು : ಮಕ್ಕಳ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಇವರ ಆಶ್ರಯದಲ್ಲಿ ಮುಂಡೂರು ಹಾಗು ನರಿಮೊಗರಿನ 6 ವರುಷದ ಕೆಳಗಿನ ಪೌಷ್ಟಿಕ ಆಹಾರದ ಕೊರತೆ ಯಿಂದ ಬಳಲುತ್ತಿರುವ ಮಕ್ಕಳ ತಪಾಸಣೆ ಹಾಗೂ ಮಕ್ಕಳಿಗೆ ಟಾನಿಕ್ ನೀಡುವ ಕಾರ್ಯಕ್ರಮಕ್ಕೆ ಪಂಜಳ ಅಂಗನವಾಡಿ ಕೇಂದ್ರ ದಲ್ಲಿ ಚಾಲನೆ ನೀಡಲಾಯಿತು.
ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಲತಾ ರವರ ನೇತೃತ್ವದಲ್ಲಿ ತಾಲೂಕಿನ ಪ್ರಥಮ ಕಾರ್ಯಕ್ರಮ ಇದಾಗಿದೆ. ಸುಮಾರು 25ಕ್ಕು ಅಧಿಕ ಮಕ್ಕಳ ತಪಾಸಣೆ ಯನ್ನು ಸರ್ವೆ ಪ್ರಾಥಮಿಕ ಕೇಂದ್ರದ ವೈದ್ಯಧಿಕಾರಿ ನಮಿತಾ ಅವರ ನೇತೃತ್ವದಲ್ಲಿ ನಡೆಯಿತು. ನಂತರ ಮಕ್ಕಳಿಗೆ ಪೌಷ್ಟಿಕ ಅಂಶ
ಒಳಗೊಂಡ ಮಲ್ಟಿ ವಿಟಮಿನ್ ಟಾನಿಕ್ ನೀಡಲಾಯಿತು. ಮಲ್ಟಿ ವಿಟಮಿನ್ ಟಾನಿಕ್ ಅನ್ನು ಶ್ರೀರಾಮ ಗೆಳೆಯರ ಬಳಗದ ಕೋವಿಡ್ ಸಹಾಯವಾಣಿ ಸದಸ್ಯ ಅಶೋಕ್ ಪುತ್ತಿಲ ಉಚಿತವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ, ಆಶಾ ಕಾರ್ಯಕತೆಯರು ಮತ್ತು ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿ ವೃಂದ ಸ್ವಾಗತಿಸಿ, ಶರ್ಮಿಳಾ ವಂದಿಸಿದರು.