ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ರಚನೆಗಾಗಿ ಭೂಮಿ ಪೂಜೆ ನಡೆಸಲಾಯಿತು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಮತ್ತು ಸಹಾಯಕ ಪ್ರಶಾಂತ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಯಾವುದೇ ಅಡೆತಡೆ ಇಲ್ಲದೆ ಮಹಾಲಿಂಗೇಶ್ವರನ ಅನುಗ್ರಹದಿಂದ ನೂತನ ಕರೆಯ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ ಎಂದು ವಸಂತ ಕೆದಿಲಾಯರವರು ಪ್ರಾರ್ಥಿಸಿದರು.
ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷಎನ್. ಚಂದ್ರಹಾಸ ಶೆಟ್ಟಿ, ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ,
ಕೋಟಿ ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,ಕೋಟಿ ಚೆನ್ನಯ ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ದುಗ್ಗಳ , ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿವಿ, ಉಪಾಧ್ಯಕ್ಷರಾದ ಸುದರ್ಶನ್ ನಾಯ್ಕ್ ಕಂಪ, ಜೋಕಿಂ ಡಿಸೋಜಾ, ವಲೇರಿಯನ್ ಡಯಾಸ್, ರೋಷನ್ ರೈ ಬನ್ನೂರು , ರಂಜಿತ್ ಬಂಗೇರ, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಪ್ರೇಮಾನಂದ ನಾಯ್ಕ್ , ನವೀನ್ ನಾಯ್ಕ್ ಬೆದ್ರಾಳ, ಧೀರಜ್ ಗೌಡ ಕೊಡಿಪ್ಪಾಡಿ, ಮೋಹನ್ ರೈ ಸೂತ್ರ ಬೆಟ್ಟು, ಉಮಾಶಂಕರ್ ನಾಯ್ಕ್ ಪಾಂಗಳಾಯಿ, ಸುಧಾಕರ ಶೆಟ್ಟಿ ಮಿತ್ತೂರು, ಚಂದ್ರಹಾಸ ಶೆಟ್ಟಿ ಪಾಲ್ತಾಡು, ಜಯಪ್ರಕಾಶ್ ಬದಿನಾರ್, ಸುದೇಶ್ ನಾಯ್ಕ್ ಚಿಕ್ಕಪುತ್ತೂರು, ವಿಲ್ಫ್ರೆಡ್ ಫೆರ್ನಾಂಡೀಸ್, ಪ್ರವೀಣ್ ಶೆಟ್ಟಿ, ಕೃಷ್ಣವೇಣಿ, ಶರತ್ ಕೇಪುಳು, ಶಶಿ ನೆಲ್ಲಿಕಟ್ಟೆ, ಪ್ರತೀಕ್ ಚಿಕ್ಕಪುತ್ತೂರು, ಲೋಕೇಶ್ ಪೆಲತ್ತಡಿ, ರೋಹನ್, ಬಾಲಕೃಷ್ಣ ಶೆಟ್ಟಿ ಸುರಭಿ ಮೊದಲಾದವರು ಉಪಸಿತರಿದ್ದರು.

ಜೋಡುಕರೆ ಕಂಬಳದ ಹೊಸ ಕರೆ ನಿರ್ಮಾಣ ಯಶಸ್ವಿಯಾಗಿ ನೆರವೇರಬೇಕೆಂಬ ಉದ್ದೇಶದಿಂದ ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮೂಲ ನಾಗನಕಟ್ಟೆಯಲ್ಲಿ ಪೂಜೆ ಸಲ್ಲಿಸಲಾಯಿತು.


























