ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ನಡೆಯುತ್ತಿರುವ ಮನೆಗೊಂದು ಬಿಲ್ವಪತ್ರೆ ನೆಡುವ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಹಾಲಿಂಗೇಶ್ವರ ದೇವಾಲಯದಿಂದ 108 ಬಿಲ್ವಪತ್ರೆ ಗಿಡಗಳನ್ನು ಪಡೆದು ಕಾರ್ಯಕರ್ತರ ಮನೆಯಲ್ಲಿ ನೆಡುವ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ, ಬಜರಂಗದಳ ಪ್ರಖಂಡ ಸಹ ಸಂಚಾಲಕ್ ಜಯಂತ್ ಕುಂಜೂರು ಪಂಜ, ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಬಲ್ನಾಡ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.