ಪುತ್ತೂರು : ಪತ್ರಿಕೋದ್ಯಮ ವಲಯದಲ್ಲಿದ್ಧುಕೊಂಡು ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ಸಿಬ್ಬಂದಿಗಳು, ವರದಿಗಾರರಿಗೆಲ್ಲರಿಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಿಟ್ ವಿತರಣೆ ಕಾರ್ಯಕ್ರಮವು ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ಜೂ.28 ರಂದು ನಡೆಯಿತು.
ಕೇರಳ – ತಮಿಳುನಾಡಿನಲ್ಲಿ ಮನೆಮನೆಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದು ಅದರಂತೆ ನಮ್ಮ ಕರ್ನಾಟಕದಲ್ಲೂ ಪತ್ರಕರ್ತರನ್ನು ಈ ಮೂಲಕವಾದರೂ ಗುರುತಿಸಿ ಆಹಾರಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ಪತ್ರಕರ್ತರು ಕೂಡಾ ವೈದ್ಯರಂತೆ-ಆರಕ್ಷಕರಂತೆ ಎಲ್ಲರ ನಡುವೆ ಇದ್ದುಕೊಂಡು ಶ್ರಮಿಸುವವರು, ಹಾಗಾಗಿ ಅಭಿಮಾನದ ವಿತರಣೆ ಕಾರ್ಯವನ್ನು ನಡೆಸಲು ಸಂತಸವಾಗುತ್ತಿದೆ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್. ಬಿ. ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಮ್, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಎಪಿಎಂಸಿ ನಿರ್ದೇಶಕ ಆಗಿರುವ ಅಬ್ದುಲ್ ಶಕೂರು ಹಾಜಿ, ಜಿಲ್ಲಾ ಕಾಂಗ್ರೆಸ್‌ನ ಯಾಕೂಬ್ ಹಾಜಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ಭಂಡಾರಿ
ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಜಾಲತಾಣದ
ಪೂರ್ಣೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.