ಮುಂಡೂರು : ಮುಂಡೂರು ಗ್ರಾಮದಲ್ಲಿ ರಸ್ತೆ ಸಮಸ್ಯೆಯಿಂದ ಪರಿಶಿಷ್ಟ ವರ್ಗದ ಕುಟುಂಬವೊಂದು ಕೊರಗುತ್ತಿದ್ದು ನಿನ್ನೆ ಆ ಮನೆಯಲ್ಲಿ ವಯೋಸಹಜ ಕಾಯಿಲೆಯಿಂದ ವಕ್ತಿಯೊಬ್ಬ ಮೃತನಾಗಿದ್ದು ಮೃತ ದೇಹವನ್ನು ಸಾಗಿಸಲು ಸಾಕಷ್ಟು ಶ್ರಮ ವಹಿಸಿದ ಘಟನೆಯೊಂದು ನಡೆಯಿತು.
ಮುಂಡೂರು ಗ್ರಾಮದ ಕುರೆಮಜಲು ಎಂಬಲ್ಲಿ ದಿ.ಮುದರ ಎಂಬವರ ಪತ್ನಿಯ ತಂದೆ ಗುರುವ ಎಂಬವರು ಮುಂಜಾನೆ ಮೃತ ಪಟ್ಟಿದ್ದು ಮನೆಯವರು ತಕ್ಷಣ ಸ್ಥಳೀಯ ಪಂಚಾಯತ್ ಸದಸ್ಯರ ಗಮನಕ್ಕೆ ತಂದರು. ಕೂಡಲೇ ಅವರು ಶಾಸಕರ ವಾರ್ ರೂಮ್ ನ ಪ್ರಮುಖ ರಾಜೇಶ್ ಬನ್ನೂರು ಅವರನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ರಾಜೇಶ್ ಬನ್ನೂರು ಅರ್ಧ ಗಂಟೆಯಲ್ಲಿ ಸಂಜೀವಿನಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಆದರೆ ಮನೆಗೆ ಮಾರ್ಗದ ಇಲ್ಲದ ಕಾರಣ ಮೃತ ದೇಹದ ಸಾಗಾಟಕ್ಕೆ ಕಷ್ಟ ಸಾಧ್ಯವಾಗಿ ಕೊನೆಗೆ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ,ಅಶೋಕ್ ಪುತ್ತಿಲ ತಾವೇ ಸ್ವತಃ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಇವರ ಗುಣಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೋವಿಡ್ ನ ಅಂತ್ಯಸಂಸ್ಕಾರವನ್ನು ಕೂಡ ತನ್ನ ವಾರ್ಡ್ ಎನ್ನದೆ ಬೇರೆ ವಾರ್ಡಿನಲ್ಲೂ ಕೆಲಸ ನಿರ್ವಹಿಸಿದ್ದರು. ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದು,ಸೋಂಕಿತರ ಮನೆಗೆ ಕಿಟ್ ವಿತರಿಸುವುದು ಹೀಗೆ ಹಲವಾರು ಸಾಮಾಜಿಕ ವ್ಯವಸ್ಥೆಯಡಿ ಕೆಲಸ ಮಾಡಿಕೊಂಡು ಸಮಾಜಕ್ಕೆ ಜನಪ್ರತಿನಿಧಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.