ವಿಟ್ಲ: ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕೇಪು1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರಕಾರದ ಅನುಮತಿ ದೊರಕಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ 95 ವರ್ಷಗಳ ಇತಿಹಾಸವಿದ್ದು, ಗ್ರಾಮಕ್ಕೆ ಒಂದೇ ಶಾಲೆಯಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿರುತ್ತಾರೆ.ಶಿಕ್ಷಕರು ಶಾಲಾಭಿವೃದ್ಧಿ ಸದಸ್ಯರು ಮನೆ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸಿ ಶಾಲೆಯನ್ನು ಉಳಿಸುವಂತೆ ಪೋಷಕರಲ್ಲಿ ವಿನಂತಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕರು ಮತ್ತು ದಾನಿಗಳು ಶಾಲೆಯಲ್ಲಿ ಸಭೆ ನಡೆಸಿ ಎಲ್. ಕೆ. ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಿದರು. ನಂತರ 1ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಅನುಮತಿಗಾಗಿ ಸರಕಾರಕ್ಕೆ ಮನವಿ ಮಾಡಿದರು. ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀ ಉಳ್ಳಾಲ್ತಿ ವಿದ್ಯಾವರ್ಧಕ ಸಂಘವನ್ನು ಆರಂಭಿಸಿ ಎಲ್. ಕೆ. ಜಿ ಮತ್ತು ಯುಕೆಜಿ ಶಿಕ್ಷಕರಿಗೆ ವೇತನ ಮತ್ತು 1ರಿಂದ 7ನೇ ತರಗತಿಯ ಹೆಚ್ಚುವರಿ ಶಿಕ್ಷಕರ ವೇತನ ಅಲ್ಲದೆ ಶಾಲೆಗೆ ಪೀಠೋಪಕರಣ, ವಿದ್ಯಾರ್ಥಿಗಳ ಸಮವಸ್ತ್ರ ಇತ್ಯಾದಿಗಳ ಖರ್ಚುಗಳನ್ನು ಮಾಡಿದರು. ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರಲು 4 ಕಡೆಯಿಂದಲೂ ವಾಹನಗಳ ವ್ಯವಸ್ಥೆಯನ್ನು ಮಾಡಿದರು. ಇದೀಗ ಸರಕಾರವು 2020-2021ನೆ ಸಾಲಿನಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಅನುಮತಿಯನ್ನು ನೀಡಿದೆ.
ಶಾಲೆಗೆ ಸುಮಾರು 2.30 ಎಕ್ರೆ ಜಾಗವಿದ್ದು ಅದರಲ್ಲಿ ಒಂದೂವರೆ ಎಕ್ರೆ ಜಾಗದಲ್ಲಿ ಆಟದ ಮೈದಾನವಿದೆ. ಶಾಲೆಯಲ್ಲಿ 10 ಕೊಠಡಿ ಮುಖ್ಯ ಶಿಕಷಕರ ಕೊಠಡಿ ಅನ್ನದಾಸೋಹ ಕಟ್ಟಡ ಹಾಗೂ ಭವ್ಯವಾದ ರಂಗಮಂದಿರವಿದೆ.
ಕಳೆದ 2 ವರ್ಷಗಳಲ್ಲಿ ಶಾಲೆಗೆ ಬಂದ ಅನುದಾನದ ವಿವರ
1. ಜಿಲ್ಲಾ ಪಂಚಾಯತ್‍ನಿಂದ 1.66ಲಕ್ಷದ ಪೀಠೋಪಕರಣ 2. ತಾಲೂಕು ಪಂಚಾಯತ್‍ನಿಂದ 70 ಸಾವಿರ ಛಾವಣಿ ದುರಸ್ತಿ3. ಶಾಸಕರ ನಿಧಿಯಿಂದ 50 ಸಾವಿರ ಛಾವಣಿ ದುರಸ್ತಿ 4. ಗ್ರಾಮ ಪಂಚಾಯತ್ ಅನುದಾನದಲ್ಲಿ 3 ಲಕ್ಷ ಆಟದ ಮೈದಾನ ವಿಸ್ತರಣೆ5. ಗ್ರಾಮ ಪಂಚಾಯತ್ ಅನುದಾನದ 1 ಲಕ್ಷದಲ್ಲಿ ಶೌಚಾಲಯ ನಿರ್ಮಾಣ 6. ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಿಂದ 92 ಸಾವಿರದ ಪೀಠೋಪಕರಣ7. ಸುಪ್ರಜಿತ್ ಫೌಂಡೆಶನ್‍ನಿಂದ 10 ಬೆಂಚು ಡೆಸ್ಕುಗಳ ಕೊಡುಗೆ 8. ಊರ ದಾನಿಗಳಿಂದ ಯಲ್ಕೆಜಿ ಮತ್ತು ಯುಕೆಜಿ ತರಗತಿಗಳಿಗೆ 1.50 ಲಕ್ಷದ ಪೀಠೋಪಕರಣ 9. ಶಾಲೆಯ ಹೆಚ್ಚುವರಿ ಶಿಕ್ಷಕರ ಮತ್ತು ಎಲ್. ಕೆ. ಜಿ ಮತ್ತು ಯುಕೆಜಿ ಶಿಕ್ಷಕರಿಗೆ ವೇತನ ನೀಡಲು ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ ಕೊಡುಗೆ ನೀಡಿರುತ್ತಾರೆ.