ವಿಟ್ಲ : ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಕಾಪುಮಜಲು ಘಟಕದ ವತಿಯಿಂದ ಕಾಪು ಮಜಲಿನ ರಾಜೀವಿ ಭಂಡಾರ್ತಿ ಎಂಬವರ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡಿಕೊಡಲಾಯಿತು.
ಸೇವೆಯೆಂಬ ಯಜ್ಞದಲ್ಲಿ ಸವಿದೆಯಂತೆ ಉರಿಯುವ ಎಂಬ ಧ್ಯೇಯ ವಾಕ್ಯದೊಡನೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಕಾಪುಮಜಲು ಘಟಕದ ಕಾರ್ಯಕರ್ತರು ಶ್ರಮದಾನದ ಮೂಲಕ ತಾತ್ಕಾಲಿಕ ಮನೆ ನಿರ್ಮಾಣ ಮಾಡಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡದ ಕಾರ್ಯದರ್ಶಿ ಚರಣ್ ಕಾಪುಮಜಲು, ಸಹ ಸುರಕ್ಷಾ ಪ್ರಮುಖ ದೇವದಾಸ್ ಪೂಜಾರಿ ಕಾಪುಮಜಲು, ಬಂಟ್ವಾಳ ತಾಲೂಕು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಬಂಟ್ವಾಳ ತಾಲೂಕು ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಅರವಿಂದ ರೈ ಮೂರ್ಜೆಬೆಟ್ಟು, ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾಪುಮಜಲು ಘಟಕದ ಸದಸ್ಯರಾದ ಪ್ರಶಾಂತ್ ಪೂಜಾರಿ, ನವೀನ ಎಸ್. ಕೆ, ಶಿವರಾಜ್, ಲೋಕೇಶ್ ಗಾಣಿಗ, ಲೋಕೇಶ್ ಕರ್ಕಳ, ತಿಲಕ್ ಕಾಪುಮಜಲು, ಯಶವಂತ, ಸಂತೋಷ ಶೆಟ್ಟಿ, ರಕ್ಷಿತ್, ಸುಕೇಶ,ಯಕ್ಷೀತ್, ಜಯ ಜೋಗಿ,ನವೀನ್ ಜೋಗಿ, ರಂಜಿತ್ ಜೋಗಿ, ರಿತೇಶ್ ಜೋಗಿ, ವಿನಯ ಜೋಗಿ,ಡೊಂಬಯ ಸಪಲ್ಯ,ಪವನ್, ಫ್ರೆಂಡ್ ಕಾಪುಮಜಲು ಇದರ ಅಧ್ಯಕ್ಷರಾದ ವಸಂತ ಪೂಜಾರಿ,ಕಾರ್ಯದರ್ಶಿ ಪ್ರವೀಣ್,ಸದಸ್ಯರಾದ ಚರಣ್ ಜೋಗಿ, ಯತೀಶ್ ಶೆಟ್ಟಿ, ಆನಂದ ಮಡಿವಾಳ ಕಾಪುಮಜಲು, ನಾಗೇಶ್ ಜೋಗಿ, ರೋಹಿತ್ ಶ್ರಮದಾನ ಕಾರ್ಯಕ್ರಮದಲ್ಲಿ ಸಹಕರಿಸಿದರು.