ಕೌಡಿಚ್ಚಾರ್:ಹುಣಸೂರು ಬಳಿ ನಡೆದ ಅಪಘಾತದಲ್ಲಿ ಕಾವು ಮಾಡನ್ನೂರಿನ ಯುವಕನೋರ್ವ ಮೃತಪಟ್ಟಿದ್ದಾರೆ. ಮಾಡನ್ನೂರು ನಿವಾಸಿ ಸುಲೈಮಾನ್ ಅವರ ಪುತ್ರ ಸಂಶುದ್ದೀನ್ (26ವ.)ಮೃತ ಪಟ್ಟವರು.
ಆ.27ರಂದು ರಾತ್ರಿ ಬೈಕ್ ಮತ್ತು ಟೆಂಪೋ ಟ್ರಾವೆಲ್ಲರ್ ನಡುವೆ ಅಪಘಾತ ಸಂಭವಿಸಿದೆ. ಮೈಸೂರುನಲ್ಲಿ ಪಾಲುದಾರಿಕೆಯೊಂದಿಗೆ ಲಾಡ್ಜಿಂಗ್ ವ್ಯವಹಾರ ನಡೆಸಿಕೊಂಡಿದ್ದ ಸಂಶುದ್ದೀನ್ ಅವರು ಮನೆಗೆ ಬಂದಿದ್ದವರು ಆ.27ರಂದು ಸಂಜೆ ವೇಳೆ ಬೈಕ್‌ನಲ್ಲಿ ಮೈಸೂರಿಗೆಂದು ಹೊರಟು ಹೋಗಿದ್ದರು.
ಹುಣಸೂರು ಸಮೀಪ ಅವರ ಬೈಕ್ ಮತ್ತು ಟೆಂಪೋ ಟ್ರಾವೆಲ್ಲರ್ ನಡುವೆ ಅಪಘಾತ ಸಂಭವಿಸಿತ್ತು.ಗಂಭೀರ ಗಾಯಗೊಂಡಿದ್ದ ಸಂಶುದ್ದೀನ್ ಅವರು ಸಾವನ್ನಪ್ಪಿದ್ದಾರೆ.
ಅಪಘಾತದ ಬಳಿಕ ಅಲ್ಲಿಂದ ಸಂಶುದ್ದೀನ್ ಅವರ ಮನೆಯವರಿಗೆ ಮಾಹಿತಿ ಬಂದಿತ್ತು.ಮೃತದೇಹವನ್ನು ಆ.28ರಂದು ತಂದು ಮಾಡ್ನೂರು ಮಸೀದಿಯಲ್ಲಿ ದಫನ ಮಾಡಲಾಯಿತು.
ಅವಿವಾಹಿತರಾಗಿದ್ದ ಮೃತರು ತಂದೆ,ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.





























