ಮಂಗಳೂರು : ದಕ್ಷಿಣ ಕನ್ನಡ ಪೊಲೀಸ್ ಘಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜೂ.30 ರಂದು ವಯೋ ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.
ಸುಳ್ಯ ಠಾಣಾ ಎ. ಎಸ್.ಐ ಕೃಷ್ಣಯ್ಯ, ಉಪ್ಪಿನಂಗಡಿ ಠಾಣಾ ಎ.ಎಸ್.ಐ ಯೋಗಿಂದ್ರ, ಮಂಗಳೂರು ಎ.ಆರ್.ಎಸ್.ಐ.ಡಿ.ಎ.ಆರ್ ನ ಭುಜಂಗ, ಸುಳ್ಯ ಠಾಣಾ ಬಿ.ಎ.ಎಸ್.ಐ ರಘುರಾಮ ಹೆಗ್ಡೆ, ಸುಳ್ಯ ಠಾಣಾ ಎ. ಎಸ್. ಐ ಭಾಸ್ಕರ್ ಪ್ರಸಾದ್,ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಎ. ಎಸ್. ಐ ಬಾಲಕೃಷ್ಣ ಗೌಡ ಬಿ, ಮಂಗಳೂರು ಎ. ಆರ್. ಎಸ್. ಐ. ಡಿ. ಎ.ಆರ್ ನ ನಾರಾಯಣ ಗಟ್ಟಿ ರವರನ್ನು ಪೊಲೀಸ್ ಅಧೀಕ್ಷಕರಾದ ಸೋನಾವಣೆ ರಿಷಿಕೇಶ್ ಭಗವಾನ್ ರವರ ನೇತೃತ್ವದಲ್ಲಿ ಬೀಳ್ಕೊಡಲಾಯಿತು.