ಉಪ್ಪಿನಂಗಡಿ ಪೊಲೀಸ್ ಠಾಣಾ ಅಕ್ರ:18/2005, ಕಲಂ:4, 6, ಪೋಕ್ಸೋ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯಾದ ಕೌಕ್ರಾಡಿ ನಿವಾಸಿ ರಮೇಶ ಎಂಬಾತನನ್ನು ದಿನಾಂಕ:10-09-2026 ರಂದು ಉಪ್ಪಿನಂಗಡಿ ಠಾಣಾ ಸಿಬ್ಬಂಧಿಯವರಾದ ಹೆಚ್ ಸಿ-508 ದಯಾನಂದ ಪಿಸಿ 453 ರವಿರಾಜ್ ರವರು ನೆಲ್ಯಾಡಿ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.



























