ಪುತ್ತೂರು : ಅಂಜನಕೋಡಿ ನಿವಾಸಿ ದಾಸಪ್ಪ ಪಕ್ಕಳ (79) ರವರು ಹೃದಯಾಘಾತದಿಂದಾಗಿ ಜು.2 ರಂದು ನಿಧನರಾದರು.
ಇವರು 48 ವರುಷಗಳಿಂದ ಪುತ್ತೂರು ಜಾತ್ರೋತ್ಸವದ ಸಂದರ್ಭದಲ್ಲಿ ಬೆಡಿ ಮದ್ದಿನ ಹಣ ಸಂಗ್ರಹಣೆ ಮಾಡುತ್ತಿದ್ದು, “ಬೆಡಿ ಮದ್ದು ಪಕ್ಕಳರು” ಎಂದೇ ಪ್ರಸಿದ್ಧಿ ಪಡೆದಿದ್ದರು. ವಯೋಸಹಜ ಕಾರಣದಿಂದಾಗಿ ಕಳೆದ ವರ್ಷದಲ್ಲಿ ಈ ಕಾರ್ಯದಿಂದ ಇವರು ನಿವೃತ್ತಿ ಹೊಂದಿದರು.
ದಿ.ತನಿಯಪ್ಪ ಪಕ್ಕಳ ಪುತ್ತೂರು ರವರ ಪುತ್ರರಾದ ಇವರು ಪತ್ನಿ ಗಿರಿಜಾ, ಪುತ್ರ ಹರೀಶ್ ಪಕ್ಕಳ, ಪುತ್ರಿಯರಾದ ಶಾಲಿನಿ, ವಿಶಾಲಾಕ್ಷಿ, ವಿನಯ, ವಿದ್ಯಾ, ವಿನುತಾ,ಧನಲಕ್ಷ್ಮೀ, ಶೈನಿ ರವರನ್ನು ಅಗಲಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮ್ಯಾನೇಜರ್ ಹರೀಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಬಿ ವಿಶ್ವನಾಥ ರೈ, ಪುರಸಭಾ ಮಾಜಿ ಅಧ್ಯಕ್ಷ ಸೂತ್ರ ಬೆಟ್ಟು ಜಗನಾಥ ರೈ, ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜೋಕಿಮ್ ಡಿಸೋಜ, ಪುರಸಭಾ ಮಾಜಿ ಸದಸ್ಯರುಗಳಾದ ನವೀನ್ ಚಂದ್ರ ನಾಯಕ್ ಬೆದ್ರಾಳ, ರಮೇಶ್ ರೈ, ಬಿಜೆಪಿ ಮುಖಂಡರಾದ ರಾಮ್ ದಾಸ್ ಹಾರಾಡಿ ಮತ್ತಿತರ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.