ಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿದ್ದ ನೆಹರುನಗರ ನಿವಾಸಿ ಶಿವಪ್ರಸಾದ್ ಜಿ.ಎಸ್ (45ವ.)ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಅವರು ಅ.14ರಂದು ಕೆಲಸಕ್ಕೆ ತೆರಳದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮುಂಜಾನೆ 2ರ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿದ್ದು, ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ನಲ್ಲಿ ಅಕ್ಷರದಾಸೋಹ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದ ಶಿವಪ್ರಸಾದ್ ಅವರು, ಎರಡು ವರ್ಷಗಳ ಹಿಂದೆ ಪದೋನ್ನತಿ ಹೊಂದಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು.
ಸುಳ್ಯ ಉಬರಡ್ಕ ಹುಳಿಯಡ್ಕ ನಿವಾಸಿ ಶಿವರಾಮ ನಾಯಕ್ ಅವರ ಪುತ್ರ ಶಿವಪ್ರಸಾದ್ರವರು ಪುತ್ತೂರಿನ ನೆಹರೂನಗರ ಸಮೀಪ ವಾಸ್ತವ್ಯವಿದ್ದರು. ಮೃತರು ಪತ್ನಿ ಅಮಿತಾ ನಾಯಕ್ ಮತ್ತು ಪುತ್ರಿಯರಾದ ಅಂಶಿಕ, ಆತ್ಮಿಕರವರನ್ನು ಆಗಲಿದ್ದಾರೆ.

























