ಪುತ್ತೂರು : ಪುತ್ತೂರು ಗಾಂಧಿ ಕಟ್ಟೆಯಲ್ಲಿರುವ ಗಾಂಧಿ ಪ್ರತಿಮೆಗೆ ಯಾರೋ ಕಿಡಿಗೇಡಿಗಳು ಅವಮಾನ ಮಾಡಿದ ಘಟನೆ ಜು.1 ರಂದು ಬೆಳಕಿಗೆ ಬಂದಿದ್ದು, ಆದರೇ ಈ ಘಟನೆಗೆ ಟ್ವಿಸ್ಟ್ ದೊರಕಿದೆ.
ಗಾಂಧಿ ಪ್ರತಿಮೆಯ ತಲೆ ಮೇಲೆ ಬಟ್ಟೆ ಹಾಗೂ ಕನ್ನಡಕವನ್ನು ಇಟ್ಟ ವ್ಯಕ್ತಿಯನ್ನು ಸಿಸಿ ಕ್ಯಾಮರಾ ಆಧಾರದ ಮೂಲಕ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಗಾಂಧಿ ಕಟ್ಟೆಯ ಹತ್ತಿರದ ಸಿಸಿ ಕ್ಯಾಮರಾವನ್ನು ಪರೀಶಿಲನೆ ನಡೆಸಿದಾಗ ಓರ್ವ ವ್ಯಕ್ತಿ ಗಾಂಧಿ ಕಟ್ಟೆಯ ಸಮೀಪ ಬಂದು ಆತನ ಚಪ್ಪಲಿಯನ್ನು ಗಾಂಧಿಕಟ್ಟೆಯ ಆವರಣದ ಹೊರಗಡೆ ಕಳಚಿ, ಗಾಂಧಿ ಪ್ರತಿಮೆಯನ್ನು ಬಟ್ಟೆಯಿಂದ ಸ್ವಚ್ಛ ಮಾಡಿ ಗಾಂಧಿ ಪ್ರತಿಮೆಯ ತಲೆ ಮೇಲೆ ಬಟ್ಟೆಯನ್ನು ಬಿಟ್ಟು ಹೋಗಿರುವುದು ಕಂಡು ಬಂದಿದೆ. ಪ್ರತಿಮೆಗೆ ಯಾವುದೇ ಹಾನಿ ಮಾಡದೇ ಸುಮಾರು 10 ನಿಮಿಷಗಳ ಕಾಲ ಕಟ್ಟೆಯ ಸಮೀಪ ಕುಳಿತುಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಗ್ಗೆ ವಿಚಾರಣೆ ನಡೆಸಿದಾಗ ಈತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಪುತ್ತೂರು ಪೇಟೆಯಲ್ಲಿ ತಿರುಗಾಡುತ್ತಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.