ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಮೊಟ್ಟ ಮೊದಲ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರನ್ನು ನೇಮಕ ಮಾಡಲಾಗಿದ್ದು, ಜು.2ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
2007ರಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ತರಿಕೆರೆ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಇಲಾಖೆಗೆ ಸೇರ್ಪಡೆಗೊಂಡ ಹೆಚ್.ಈ. ನಾಗರಾಜ್ ರವರು ಆ ಬಳಿಕ ಕಡಬ, ಬಂಟ್ವಾಳ ಗ್ರಾಮಾಂತರ, ಪುತ್ತೂರು ಸಂಚಾರಿ, ವಿಟ್ಲ, ವೇಣೂರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2019ರಲ್ಲಿ ವೇಣೂರು ಪೊಲೀಸ್ ಠಾಣೆಯಿಂದ ಇನ್ಸ್ ಪೆಕ್ಟರ್ ಆಗಿ ಭಡ್ತಿಹೊಂದಿದ ಅವರು ಕರಾವಳಿ ಕಾವಲು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಮೇಲ್ದರ್ಜೆಗೇರಿರುವ ವಿಟ್ಲ ಪೊಲೀಸ್ ಠಾಣೆಗೆ ಪ್ರಥಮ ಇನ್ಸ್ಪೆಕ್ಟರ್ ಆಗಿ ಹೆಚ್. ಈ. ನಾಗರಾಜ್ ರವರು ನೇಮಕಗೊಂಡಿದ್ದಾರೆ.
ಹೆಚ್. ಈ. ನಾಗರಾಜ್ ರವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನವರಾಗಿದ್ದಾರೆ. ವಿಟ್ಲ ಠಾಣೆಗೆ ಆಗಮಿಸಿದ ಇನ್ಸ್ ಪೆಕ್ಟ್ ರ್ ಹೆಚ್.ಈ. ನಾಗರಾಜ್ ರವರನ್ನು ಬಂಟ್ವಾಳ ಸಂಚಾರಿ ಠಾಣಾ ಎಸ್.ಐ., ರಾಜೇಶ್ ಕೆ.ವಿ. ರವರು ಹೂಗುಚ್ಚ ನೀಡಿ ಸ್ವಾಗತಿಸಿದರು. ವಿಟ್ಲ ಠಾಣಾ ಎಸ್. ಐ. ವಿನೋದ್ ರೆಡ್ಡಿಯವರ ವರ್ಗಾವಣೆ ಬಳಿಕ ನೂತನ ಎಸ್.ಐ ನೇಮಕಗೊಳ್ಳುವ ವರೆಗೆ ಬಂಟ್ವಾಳ ಸಂಚಾರಿ ಠಾಣಾ ಎಸ್.ಐ ರಾಜೇಶ್ ಕೆ.ವಿ.ರವರು ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.