ಪುತ್ತೂರು; ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿ ಸುಮಾರು 8 ಕುಟಂಬಗಳಿಗೆ ಶನಿವಾರ ಶಾಸಕ ಅಶೋಕ್ ರಐ ಅವರು 94 ಸಿ ಹಕ್ಕು ಪತ್ರವನ್ನು ನೀಡಿದ್ದು , ಹಕ್ಕು ಪತ್ರ ಸ್ವೀಕರಿಸಿದ ಫಲಾನುಭವಿಗಳು ತಮಗೆ ಬಿಜೆಪಿಯವರು ಅನ್ಯಾಯ ಮಾಡಿದ್ದಾರೆ ಎಂದು ಸಾರ್ವಜನಿಕರ ಎದುರಲ್ಲೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಶಾಸಕರು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನಡೆಸಲು ಪುಚ್ಚೆಗುತ್ತುಗೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಸುಮಾರು ಆರು ಕುಟುಂಬಗಳು ನಾವು ಮನೆ ಕಟ್ಟಿ ಎಷ್ಟೋ ವರ್ಷ ಆಗಿದೆ. ನಮ್ಮ ಮನೆಯ ಅಡಿ ಸ್ಥಳಕ್ಕೆ ಇನ್ನೂ ಹಕ್ಕು ಪತ್ರ ಕೊಟ್ಟಿಲ್ಲ. 18 ವರ್ಷದಿಂದ ನಾವು ಹಕ್ಕು ಪತ್ರಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ, ಇದೇ ವಿಚಾರದಲ್ಲಿ ಪ್ರತಿಭಟನೆಯನ್ನು ನಡೆಸಿದ್ದೇವೆ ಎಂದು ಶಾಸಕರಲ್ಲಿ ಹೇಳಿದ್ದರು.
ಆರು ಕುಟುಂಬಗಳ ಮನೆ ಅಡಿಸ್ಥಳಕ್ಕೆ ಸಲ್ಲಿಸಿದ 94 ಸಿ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಿ ಎಂದು ಸ್ಥಳದಿಂದಲೇ ಬಂಟ್ವಾಳ ತಹಶಿಲ್ದಾರ್ಗೆ ಶಾಸಕರು ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯ ಒಂದೂವರೆ ತಿಂಗಳ ಬಳಿಕ ಇಂದು ಪೆರ್ನಯಲ್ಲಿ ನಡೆದ ಪ್ರಜಾಸೇವಾ ಆಂದೋಲನದ ಬಳಿಕ ಹಕ್ಕು ಪತ್ರವನ್ನು ನೀಡಲಾಯಿತು. ಹಕ್ಕು ಪತ್ರ ಪಡೆಯಲು ಆರು ಕುಟುಂಬಗಳು ಪೆರ್ನೆಗೆ ಬಂದಿದ್ದರು.ಪುಚ್ಚೆಗುತ್ತು ನಿವಾಸಿಗಳಾದ ರಾಧಾ ಯು, ಸುಜಾತಾ, ಉಮಾದೇವು, ವಿಮಲಾ, ಚಂಧ್ರಾವತಿ, ಮತ್ತು ಸಂತೋಷ್ರವರು ಹಕ್ಕು ಪತ್ರವನ್ನು ಪಡೆದುಕೊಂಡರು.
ಬಿಜೆಪಿಯವರು ನಮಗೆ ಮೋಸ ಮಾಡಿದ್ರು :ಇದೇ ಸಂದರ್ಭದಲ್ಲಿ ಹಕ್ಕು ಪತ್ರ ಸಿಕ್ಕಿದ ಖುಷಿಯಲ್ಲಿ ಮಾತನಾಡಿದ ವಿಜಯಭಟ್ರವರು ನಾವು ಇಷ್ಟು ವರ್ಷ ಬಿಜೆಪಿಯವರನ್ನು ನಂಬಿದ್ದೆವು. ಹಕ್ಕು ಪತ್ರ ಕೊಡಿಸುವುದಾಗಿ ಹೇಳಿ 18 ವರ್ಷ ಕುಣಿಸಿದ್ದಾರೆ, ಬಿಜೆಪಿ ಕಚೇರಿಗೆ ಅಲೆದಾಟ ಮಾಡಿದ್ದೇವೆ ನಯಾ ಪೈಸೆ ಪ್ರಯೋಜನವಾಗಿಲ್ಲ. ನಾಳೆ ನಾಳೆ ಎಂದು ದಿನ ದೂಡುತ್ತಲೇ ನಮ್ಮನ್ನು ಮೋಸ ಮಾಡಿದರು. ಕೆಲದಿನಗಳ ಹಿಂದೆ ನಮ್ಮ ಗ್ರಾಮಕ್ಕೆ ಶಾಸಕ ಅಶೋಕ್ ರೈ ಬಂದಾಗ ಸಮಸ್ಯೆ ಹೇಳಿದ್ದೆವು. ಒಂದೂವರೆ ತಿಂಗಳಲ್ಲೇ ನಮಗೆ ಹಕ್ಕು ಪತ್ರ ಕೊಡಿಸಿದ್ದಾರೆ. ಇನ್ನು ಮುಂದೆ ನಾವು ಬಿಜೆಪಿಯವರ ಹಿಂದೆ ಹೋಗುವುದೇ ಇಲ್ಲ – ವಿಜಯಾಭಟ್, ಫಲಾನುಭವಿ
ಮನೆಯ ಅಡಿಸ್ಥಳಕ್ಕೆ ದಾಖಲೆ ಇಲ್ಲದೆ ನಾವು ಎಷ್ಟು ಕಷ್ಟಪಟ್ಟಿದ್ದೆವು. ಮಠoದೂರು ಶಾಸಕರಾಗಿದ್ದ ವೇಳೆ ನಾವು ಕೈಮುಗಿದು ಬೇಡಿಕೊಂಡೆವು ಕೊಡುವುದಾಗಿ ಹೇಳಿ ನಮಗೆ ಹಕ್ಕು ಪತ್ರ ಕೊಟ್ಟಿಲ್ಲ. ಹಕ್ಕು ಪತ್ರವಿಲ್ಲದೆ ನಮಗೆ ಮನೆಗೆ ಲೋನ್ ಪಡೆಯಲು ಕಷ್ಟ ಸಾಧ್ಯವಾಗಿತ್ತು. ನಾವು ಯಾರನ್ನು ನಂಬಿದ್ದೆವೋ ಅವರು ನಮಗೆ ಕೈ ಕೊಟ್ರು. ಶಾಸಕ ಅಶೋಕ್ ರೈ ನಮಗೆ ನ್ಯಾಯ ಕೊಡಿಸಿದ್ದಾರೆ. ಇದು ನಮ್ಮ ಜೀವನದಲ್ಲಿ ಮರೆಯಲಾಗದ ದಿನವಾಗಿದೆ. ಶಾಸಕರು ಮನಸ್ಸು ಮಾಡಿದರೆ ಬಡವರನ್ನು ಯಾವ ರೀತಿ ಮೇಲಕ್ಕೆತ್ತಬಹುದು ಅಥವಾ ಉಪಕಾರ ಮಾಡಬಹುದು ಎಂಬುದಕ್ಕೆ ಶಾಸಕ ಅಶೋಕ್ ರೈ ಸಾಕ್ಷಿಯಾಗಿದ್ದಾರೆ. – ಸಂತೋಷ್ ಪುಚ್ಚೆಗುತ್ತು ಫಲಾನುಭವಿ
ನಾನು ಪುಚ್ಚೆಗುತ್ತುಗೆ ಹೋದಾಗ ಈ ಕುಟುಂಬಗಳು ನನ್ನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಎಷ್ಟೋ ವರ್ಷದಿಂದ ಮನೆ ಮಾಡಿಕೊಂಡಿದ್ದರೂ ಇವರ ಮನೆಯ ಅಡಿಸ್ಥಳಕ್ಕೆ ಹಕ್ಕು ಪತ್ರ ಕೊಟ್ಟಿರಲಿಲ್ಲ. ತಕ್ಷಣವೇ ಬಂಟ್ವಾಳ ತಹಶಿಲ್ದಾರ್ಗೆ ಕರೆ ಮಾಡಿ ಹಕ್ಕು ಪತ್ರ ರೆಡಿಮಾಡುವಂತೆ ಸೂಚನೆಯನ್ನು ನೀಡಿದ್ದೆ. ಹಕ್ಕು ಪತ್ರ ಸಿದ್ದವಾಗಿದೆ, ಕೊಟ್ಟಿದ್ದೇನೆ. ಈ ಕುಟುಂಬಗಳು ತುಂಬಾ ಬಡವರು ತಾವು ವಾಸ ಮಾಡುತ್ತಿದ್ದ ಮನೆಯ ಅಡಿಸ್ಥಳದ ಹಕ್ಕು ಪತ್ರವನ್ನು ಮಾತ್ರ ಇವರು ಕೇಳಿದ್ದು ಅದನ್ನು ಕೊಡಿಸುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯವಾಗಿದೆ ಅದನ್ನೇ ಮಾಡಿದ್ದೇನೆ. ಈ ಹಿಂದೆ ಇವರಿಂದ ವೋಟು ಪಡೆದವರು ಇವರಿಗೆ ಮೋಸ ಮಾಡಿದ್ದಾರಂತೆ. ಬಡವರ ಸಂತೋಷವೇ ನನ್ನ ತೃಪ್ತಿ.- ಅಶೋಕ್ ರೈ ಶಾಸಕರು ಪುತ್ತೂರು

























