ಪುತ್ತೂರು: ಸೇಡಿಯಾಪು ಕಜೆ ನಿವಾಸಿ ಸೆಂಟ್ರಿಂಗ್ ಕಾರ್ಮಿಕ ಲೋಕಪ್ಪ (52) ಅವರು ಸಾಮೆತ್ತಡ್ಕದ ಮನೆಯೊಂದರಲ್ಲಿ ಮೃತಪಟ್ಟ ಘಟನೆ ಅ.24ರಂದು ಬೆಳಕಿಗೆ ಬಂದಿದೆ.
ಲೋಕಪ್ಪ ಅವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಸಾಮೆತ್ತಡ್ಕದ ಮನೆಯೊಂದರಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸದ ನಿಮಿತ್ತ ಅಲ್ಲಿಯೇ ತಂಗಿದ್ದ ಅವರು, ಅ.23ರ ರಾತ್ರಿ ಮಲಗಿದ್ದು, ಮರುದಿನ ಬೆಳಗ್ಗೆ ಎದ್ದೇಳದಿರುವುದನ್ನು ಗಮನಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.
ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸೇಡಿಯಾಪು ಕಜೆಯ ದಿ. ಚಿನ್ಮಯ ಮೂಲ್ಯ ಮತ್ತು ದಿ. ದೇವಕಿ ದಂಪತಿಯ ಪುತ್ರರಾಗಿದ್ದ ಲೋಕಪ್ಪ ಅವರು ಕೆಲಸಕ್ಕೆ ತೆರಳಿದ ಸ್ಥಳದಲ್ಲೇ ತಂಗುತ್ತಿದ್ದರು ಎನ್ನಲಾಗಿದೆ.
ಮೃತರು ಪತ್ನಿ, ಮಕ್ಕಳು, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.























