ಮುಂಡೂರು : ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ಪ್ರಯುಕ್ತ ಮುಂಡೂರು ಗ್ರಾಮ ಬಿಜೆಪಿ ಬೂತ್ ಸಂಖ್ಯೆ 188ರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಮತ್ತು ಬೂತ್ ಅಧ್ಯಕ್ಷರಾದ ಶ್ರೀಧರ ಪುತ್ತಿಲ ನೇತೃತ್ವದಲ್ಲಿ ಅಶ್ವಥ ಗಿಡ ನೆಡುವ ಮುಖಾಂತರ ವೃಕ್ಷಾರೋಪಣ ಕಾರ್ಯಕ್ರಮವು ಮೃತ್ಯುಂಜೇಶ್ವರ ದೇವಸ್ಥಾನದ ಪಕ್ಕದಲ್ಲಿ ಜು.3 ರಂದು ನಡೆಯಿತು.
ದೇಶದ ಅಖಂಡತೆಗೆ ಸರ್ವಭೌಮದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕರ ಆದರ್ಶಗಳನ್ನು ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ನೆನಪಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶೋಕ್ ಕುಮಾರ್ ಪುತ್ತಿಲ ಬಾಲಕೃಷ್ಣ ಪೂಜಾರಿ ಕುರೆಮಜಲು, ಅರುಣಾ ಅನಿಲ್ ಕಣ್ಣರ್ನೂಜಿ, ನಿತ್ಯೋದಯ ಯುವಕ ಮಂಡಲ ಕರಮನೆ ಕಟ್ಟೆ ಸದಸ್ಯ ಮೋಹನ ನಾಯ್ಕ ಕೇದಗೆದಡಿ, ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು ಜನಾರ್ಧನ ಜೋಯಿಸ ಕುತ್ತಿಗದ್ದೆ, ಮಾಜಿ ಎಪಿಎಂಸಿ ಸದಸ್ಯರಾದ ಸುಂದರ ಬಿಕೆ ಮತ್ತು ಬಿಜೆಪಿ ಕಾರ್ಯಕರ್ತರಾದ ಹರೀಶ ಬಿಕೆ, ಧನಂಜಯ ಕಲ್ಲಮ, ಪ್ರಸಾದ್ ಬಿಕೆ, ಜಗದೀಶ ಕಲ್ಲಮ, ಪ್ರತೀಕ್ ನಾಡಜೆ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ, ದಿನೇಶ್ ಬಿಕೆ, ಉಪಸ್ಥಿತರಿದ್ದರು. ಬೂತ್ ಸಂಖ್ಯೆ 188 ರ ಅಧ್ಯಕ್ಷರಾದ ಶ್ರೀಧರ ಪುತ್ತಿಲ ಸ್ವಾಗತಿ, ಕಾರ್ಯದರ್ಶಿಗಳಾದ ಜನಾರ್ಧನ ಕುರೆಮಜಲು ವಂದಿಸಿದರು.