ಪುತ್ತೂರು: ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಇದರ ನೇತೃತ್ವದಲ್ಲಿ ಕಳೆದ 4 ವರ್ಷಗಳಿಂದ ಪುತ್ತೂರು ತಾಲೂಕಿನಾದ್ಯಂತ, ದುರ್ಬಲರಿಗೆ, ರೋಗಿಗಳಿಗೆ ಮತ್ತು ಅಶಕ್ತರಿಗೆ ಮನೆ ನಿರ್ಮಾಣ ಮಾಡಲು ಸಹಕರಿಸಿ ಸೇವೆ ಸಲ್ಲಿಸುತ್ತಿರುವ ಸಂಘಟನೆ ವಜ್ರ ತೇಜಸ್.
ಕೊರೊನಾ 2ನೇ ಅಲೆಯ ನಂತರ ಮತ್ತೆ ಈ ಕಾರ್ಯಕ್ಕೆ ವೇಗ ನೀಡಲು ಹಾಗೂ ಸಮಾಜದ ಸೇವೆ ಮಾಡುವ ದೃಷ್ಟಿಯಿಂದ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ನೂತನ ಅಧ್ಯಕ್ಷರಾಗಿ ರಾಜಾರಾಮ್ ಪ್ರಭು ಕಲ್ಲೇಗ, ಉಪಾಧ್ಯಕ್ಷರಾಗಿ ರಾಮ್ ಪ್ರಸಾದ್ ಮಯ್ಯ, ಕಾರ್ಯದರ್ಶಿಯಾಗಿ ರವಿ ಪುಣಚ, ಸಹ ಕಾರ್ಯದರ್ಶಿಗಳಾಗಿ ಚರಣ್ ಕಂಟ್ರಾಣಿಮೂಲೆಹಾಗೂ ಜೀವನ್ ಆಚಾರ್ಯ ಬಲ್ನಾಡು ಇವರನ್ನು ಆಯ್ಕೆ ಮಾಡಲಾಗಿದೆ.