ಪುತ್ತೂರು: ಡಿ.11ರಿಂದ 13ರ ವರೆಗೆ ನಡೆಯಲಿರುವ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.5ರಂದು ಬೆಳಿಗ್ಗೆ 8.15ಕ್ಕೆ ಜರಗಿತು.
ದೇವಸ್ಥಾನ ದ ಹತ್ತಿರದ ಗೋಪಾಲಕೃಷ್ಣ ಅವರ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಗೊನೆ ಮುಹೂರ್ತ ಮಾಡಲಾಯಿತು. ದೇವಳದ ತಂತ್ರಿ ಕುಕ್ಕಾಡಿ ಪ್ರೀತಮ್ ಪುತ್ತೂರಾಯರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಸ್ಥಾನದ ಅರ್ಚಕರಾದ ವತ್ಸ ಭಟ್ ಸಹಕರಿಸಿದರು.
ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತಡ್ಡ ಹಾಗೂ ಗಣ್ಯರು ಉಪಸ್ಥಿತರಿದ್ದರು.