ಪುತ್ತೂರು: ಪರ್ಪುಂಜ ನಿವಾಸಿ ಸಂಶುದ್ದೀನ್ ಎಂಬವರ ಪತ್ನಿ ಮಾಜಿದಾ(30.ವ) ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗರ್ಭಿಣಿಯಾಗಿದ್ದ ಮಾಜಿದಾ ಅವರನ್ನು ಆರೋಗ್ಯ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜು.8ರಂದು ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಹಾಗೂ ಪುತ್ರಿ ಸಹದಿಯಾ ಅವರನ್ನು ಅಗಲಿದ್ದಾರೆ. ಮೈದಾನಿಮೂಲೆ ಜಮಾಅತ್ಗೊಳಪಟ್ಟ ದಫನಭೂಮಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.