ಕಡಬ: ಜೂ.29ರಂದು ಆತೂರು ಚೆಕ್ ಪಾಯಿಂಟ್ ನಲ್ಲಿ ಕಡಬ ಪೊಲೀಸರು ವಾಹನದ ದಾಖಲೆ ಪರಿಶೀಲನೆ ಮಾಡುತ್ತಿದ್ದ ವೇಳೆ ದಾಖಲೆ ತೋರಿಸಿ ಹಿಂದಿರುಗುತ್ತಿದ್ದ ವೇಳೆ ವಾಹನ ಅಪಘಾತದಲ್ಲಿ ಆತೂರು ಬೈಲು ಪುತ್ತುಮೋನು ಎಂಬವರ ಪುತ್ರ ಎ.ಪಿ.ಹ್ಯಾರಿಸ್ ಎಂಬವರು ಮೃತಪಟ್ಟ ಬಳಿಕ ನಡೆದ ಚೆಕ್ ಪೋಸ್ಟ್ ಧ್ವಂಸ ಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಆತೂರು ಚೆಕ್ ಪೋಸ್ಟ್ ಧ್ವಂಸ ಮಾಡಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಕೊಯಿಲ ಗ್ರಾಮದ ಗೋಕುಲ ನಗರ ನಿವಾಸಿಗಳಾದ ಮಹಮದ್ ರಫೀಕ್ ಮತ್ತು ಮೊಹಮ್ಮದ್ ನವಾಜ್ ಬಂಧಿತರು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜು. 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ವಾರ ಈ ಘಟನೆಗೆ ಸಂಬಂಧಿಸಿ ಕೊಯಿಲ ಗ್ರಾಮದ ಹಲ್ಲಿ ಅರಮನೆ ಪುತ್ರ ಮಹಮ್ಮದ್ ಆಫೀಸ್ ಮತ್ತು ಕೊಯಿಲ ಗ್ರಾಮದ ಎಂತಾರು ಮೊಹಮ್ಮದ್ ನವಾಜ್ ರವರನ್ನು ಬಂಧಿಸಲಾಗಿತ್ತು. ಆರೋಪಿಗಳು ಶರತ್ತುಬದ್ಧ ಜಾಮೀನೊಂದಿಗೆ ಹೊರ ಬಂದಿದ್ದರು. ಇಂದು ಬಂಧನವಾದ ಮಹಮ್ಮದ್ ರಫೀಕ್ ಮೇಲೆ ಈ ಹಿಂದೆ ದನ ಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಶೆಡ್ ದ್ವಂಸದಲ್ಲಿ ಭಾಗಿಯಾದ ಇನ್ನಷ್ಟು ವ್ಯಕ್ತಿಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.