ಪುತ್ತೂರು : ಮಹಿಳೆಯೊಬ್ಬರು ಮಗಳ ಮನೆಗೆ ಹೋಗುವುದಾಗಿ ಬಂದು ದಾರಿ ತಪ್ಪಿ ಬಸ್ ನಿಲ್ದಾಣದ ಬಳಿ ಕುಳಿತ್ತಿದ್ದು, ಅವರನ್ನು Zoom.InTv ಸಿಬ್ಬಂದಿ ಮತ್ತು ರಿಕ್ಷಾ ಚಾಲಕರು ಮಗಳ ಮನೆಗೆ ಸುರಕ್ಷಿತವಾಗಿ ತಲುಪಿಸಿದ ಘಟನೆ ಜು.8 ರಂದು ನಡೆದಿದೆ.
ಚೊಕ್ಕಾಡಿಯ ಮಹಿಳೆಯೊಬ್ಬರು ತನ್ನ ಮಗಳ ಮನೆಗೆ ಹೋಗುವುದಾಗಿ ಮನೆಯಿಂದ ಬಂದು ಮಗಳ ಮನೆಗೆ ಹೋಗಲು ಸರಿಯಾದ ದಾರಿ ತಿಳಿಯದೇ ಪುತ್ತೂರು ಬಸ್ ನಿಲ್ದಾಣ ಬಳಿ ಕುಳಿತಿದ್ದು, ಮಹಿಳೆಯನ್ನು ಗಮನಿಸಿದ ರಿಕ್ಷಾ ಚಾಲಕರು ಮಹಿಳೆ ಬಳಿ ವಿಚಾರಿಸಿ Zoom.InTv ಯನ್ನು ಸಂಪರ್ಕಿಸಿದ್ದು, ಅಲ್ಲಿಗೆ ತೆರಳಿದ Zoom.InTv ಸಿಬ್ಬಂದಿಗಳು ಮಹಿಳೆಯ ಬಳಿ ಇದ್ದ ಆಧಾರ್ ಕಾರ್ಡ್ ತೆಗೆದುಕೊಂಡು ಅಲ್ಲಿನ ಗ್ರಾಮ ಪಂಚಾಯತ್ ಸಿಬ್ಬಂದಿ ಯಶವಂತ್ ರನ್ನು ಸಂಪರ್ಕಿಸಿ ನಂತರ ಅವರ ಮನೆಗೆ ಕರೆ ಮಾಡಿ ಮಗಳ ಮನೆ ವಿಳಾಸವನ್ನು ತೆಗೆದುಕೊಂಡು ಮಹಿಳೆಯನ್ನು ಸುರಕ್ಷಿತವಾಗಿ ಮುಂಡೂರು ಗ್ರಾಮದ ಕುರಿಯದಲ್ಲಿರುವ ಮಗಳ ಮನೆಗೆ ತಲುಪಿಸಲಾಯಿತು.
ಆಟೋ ಚಾಲಕರಾದ ಕೀರ್ತನ್, ದಿವಾಕರ್ ಹಾಗೂ Zoom.InTv ಸಿಬ್ಬಂದಿಗಳು ಮಹಿಳೆಯನ್ನು ಮನೆ ತಲುಪಿಸಿವಲ್ಲಿ ಸಹಕರಿಸಿದರು.