ಪುತ್ತೂರು: ಆರ್.ಎಸ್.ಎಸ್ ಗ್ರಾಮಾಂತರ ಮಾಜಿ ಕಾರ್ಯವಾಹ, ಹವ್ಯಕ ಸಂಘದ ಹಿರಿಯ ಧುರೀಣ ಹಿರಣ್ಯ ಗಣಪತಿ ಭಟ್ ಜು.8 ರಂದು ವಯೋಸಹಜ ಸಮಸ್ಯೆಯಿಂದ ನಿಧನರಾದರು.
ನರಿಮೊಗರು ಸಾಂದೀಪನಿ ಶಾಲೆಯ ಆಡಳಿತ ಸಮಿತಿ ಉಪಾಧ್ಯಕ್ಷರಾಗಿ, ಮುಂಡೂರು ಮೃತ್ಯುಂಜಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಣ್ಯ ಗಣಪತಿ ಭಟ್ ಅವರಿಗೆ 85 ವರ್ಷ ವಯಸ್ಸಾಗಿತು.
ಮೃತರು ಪತ್ನಿ ವಜ್ರೇಶ್ವರಿ, ಪುತ್ರ ಪುತ್ತೂರಿನ ದಂತ ವೈದ್ಯ , ಕೆವಿಜಿ ಡೆಂಟಲ್ ಕಾಲೇಜ್ ಪ್ರೋಪೆಸರ್ ಶಿವಾನಂದ ಹಾಗೂ ಇಬ್ಬರು ಪುತ್ರಿಯರಾದ ವೀಣ, ಅರ್ಚನಾ ಇವರನ್ನು ಅಗಲಿದ್ದಾರೆ.