ಬಂಟ್ವಾಳ: ಮಾಣಿ- ಕೋಚಪಲ್ಕೆ – ಹೊಸಮನೆ ರಸ್ತೆಗೆ ಕಾಂಕ್ರೀಟಿಕರಣ ಕಾಮಗಾರಿಯೂ ಪೂರ್ಣವಾಗಿದೆ. ಬಂಟ್ವಾಳ ಶಾಸಕರ ಅನುದಾನದಿಂದ ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿದೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಚಪಲ್ಕೆ – ಹೊಸಮನೆ ರಸ್ತೆಗೆ ಕಾಂಕ್ರೀಟಿಕರಣ ಮಾಡಬೇಕೇನ್ನುವುದು ಸ್ಥಳೀಯ ನಿವಾಸಿ ಗ್ರಾಮಸ್ಥರ ಹಲವು ವರ್ಷಗಳ ಮನವಿ ಆಗಿತ್ತು.ಇದೀಗ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸುಮಾರು 5ಲಕ್ಷ ರೂಪಾಯಿ ಹೆಚ್ಚುವರಿ ವೆಚ್ಚದ ಅನುದಾನದಿಂದ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಈಡೇರಿರುತ್ತದೆ.