ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿದ ಹಿನ್ನಲೆಯಲ್ಲಿ ತುರ್ತಾಗಿ ಹೋಗುವ ಆ್ಯಂಬುಲೆನ್ಸ್ ಗೆ ಅಡ್ಡಿಯಾದ ಘಟನೆ ಜು.9 ರಂದು ನಡೆದಿದೆ.
ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಒಂದು ಕಡೆ ಕೋವಿಡ್ ಲಸಿಕೆ ನೀಡಿಕೆ ಮತ್ತೊಂದು ಕಡೆ ಉತ್ತಮ ಸೇವೆ ಸಿಗುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗೆ ಬರುವವರು ಆಸ್ಪತ್ರೆಯ ವಠಾರದ ದಾರಿಯಲ್ಲೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ತುರ್ತು ವಾಹನಕ್ಕೆ ತೊಂದರೆ ಆಗುತ್ತಿತ್ತು.
ಇಂದು ತಹಸೀಲ್ದಾರರ ಕಚೇರಿಯಲ್ಲೂ ಕೋವಿಡ್ ಲಸಿಕೆ ಶಿಬಿರ ಇದ್ದುದರಿಂದ ಆ ಪ್ರದೇಶದಲ್ಲಿ ವಾಹನ ದಟ್ಟಣೆ ಆಗಿದೆ.
ಈ ನಿಟ್ಟಿನಲ್ಲಿ ಆಸ್ಪತ್ರೆಯ ಗೇಟ್ ಎದುರು ಆಸ್ಪತ್ರೆಯ ಸೆಕ್ಯೂರಿಟಿಗಳು ವಾಹನ ನಿಯಂತ್ರಣ ಮಾಡುತ್ತಿದ್ದರು.
ಆದರೆ ಜು.9ರಂದು ಬಹುತೇಕ ವಾಹನಗಳು ಆಸ್ಪತ್ರೆಯ ಆವರಣದ ಒಳಗೆ ಹೋದುದರಿಂದ ತುರ್ತು ವಾಹನಗಳಿಗೆ ಹೋಗುವುದು ಅಸಾಧ್ಯವಾಗಿತ್ತು. ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೃದಯ ಸಂಬಂಧಿತ ರೋಗಿಯನ್ನು ಕರದೊಯ್ಯಲು108 ಆ್ಯಂಬುಲೆನ್ಸ್ ಆಸ್ಪತ್ರೆಯ ಆವರಣದೊಳಗೆ ಬಂತಾದರೂ ರೋಗಿಯನ್ನು ಕರೆದೊಯ್ಯುವ ವೇಳೆ ಆಸ್ಪತ್ರೆಯ ಆವರಣದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಕೊನೆಗೆ ಸ್ಥಳೀಯ ರಿಕ್ಷಾ ಚಾಲಕರ ಸಹಕಾರದಿಂದ ಆ್ಯಂಬುಲೆನ್ಸ್ ಸಂಚರಿಸುವಂತಾಯಿತು.
ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.