ಕಲ್ಲಡ್ಕ: ಕಲ್ಲಡ್ಕದ ಕೆಳಗಿನ ಪೇಟೆ ಹೋಟೆಲ್ ಲಕ್ಷ್ಮಿ ನಿವಾಸದ ಹತ್ತಿರ ಭಾರತ್ ಬಿಲ್ಡಿಂಗ್ ನಲ್ಲಿ ‘ ವೃಷಭ ವಿದ್ಯುತ್ ಚಾಲಿತ’ ದ್ವಿಚಕ್ರ ವಾಹನಗಳ ಶೋ ರೂಮ್ ಜು.12 ರಂದು ಶುಭಾರಂಭಗೊಂಡಿತು.
ದಕ್ಷಿಣಕನ್ನಡದ ರಸ್ತೆಗೆ ಅನುಗುಣವಾಗಿ ವಿದ್ಯುತ್ ವಾಹನಗಳು ಆರ್.ಟಿ.ಓ .ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟ್ರೇಷನ್ ರಹಿತ ಪರಿಸರಸ್ನೇಹಿ ವಾಹನಗಳ ವಾಹನಗಳು ಆಗಿದ್ದು ಕೇಂದ್ರ ಸರಕಾರದ ಸಬ್ಸಿಡಿ ವಾಹನಗಳಿಗೆ ಲಭ್ಯವಿದೆ ಹಾಗೂ ವಾಹನಗಳ ಬಿಡಿಭಾಗಗಳ ಮಾರಾಟ, ರಿಪೇರಿ ಗ್ರಾಹಕರಿಗೆ ಅನುಗುಣವಾಗಿ ಒಂದೇ ಸೂರಿನಡಿ ನಲ್ಲಿ ಸೇವೆಗಳು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತಾ ಬಿ.ಜಿ, ಪಂಚಾಯತ್ ಸದಸ್ಯರಾದ ಜಯಂತಿ, ಜಯಪ್ರಸಾದ್, ಗೋಪಿ ಕೃಷ್ಣ, ಗುರುಪ್ರಸಾದ್, ಡೀಲರ್ ಗಳಾದ ಪದ್ಮರಾಜ್, ದೀಪಕ್, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ, ಗೋಳ್ತಮಜಲು ಪಂಚಾಯತ್ ಸದಸ್ಯೆ ಲಿಖಿತಾ ಆರ್. ಶೆಟ್ಟಿ, ರತ್ನಾಕರ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.