ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಇದರ ದಕ್ಷಿಣ ಕನ್ನಡ ಜಿಲ್ಲೆಯ ಎರಡನೆ ಜಿಲ್ಲಾ ಕಚೇರಿ ಪುತ್ತೂರಿನ ಎಪಿಎಂಸಿ ರೋಡ್‍ನಲ್ಲಿರುವ ಅರುಣಾ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿದ್ದು. ಪರಮ ಪೂಜ್ಯ ಶ್ರೀ ಡಾ. ಖ.ವಿರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು. ಸಮಾಜದ ಬಡ ಜನರ ಮತ್ತು ಕೃಷಿಕರ ಉನ್ನತಿಗಾಗಿ ಮತ್ತು ಅವರ ಕಷ್ಟಗಳನ್ನು ಆಲಿಸುವ ನಿಟ್ಟಿನಲ್ಲಿ 1982 ನೇ ಇಸವಿಯಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಮಾಭಿವೃದ್ಧಿ ಯೋಜನೆ ಕಳೆದ ಇಷ್ಟು ವರ್ಷಗಳಿಂದ ಬಡವರ ಪಾಲಿನ ಆಶಾಕಿರಣವಾಗಿ ಸಾಗಿ ಬಂದಿದ್ದು. ಈಗ ಪತ್ತೂರಿನ ಅನೇಕ ಸ್ವಾಸಹಾಯ ಸಂಘಗಳಿಗೆ ನೆರವಾಗುವನಿಟ್ಟಿನಲ್ಲಿ ಜಿಲ್ಲೆಯ ಎರಡನೇ ಜಿಲ್ಲಾ ಕಚೇರಿ ಇಂದು ಶುಭಾರಂಭಗೊಂಡಿತು.ಮುಂಜಾನೆಯಿಂದ ಪುರೋಹಿತ ನೇತೃತ್ವದಲ್ಲಿ ಗಣಹೋಮ ನಡೆದು ಬಳಿಕ ಪರಮ ಪೂಜ್ಯ ಶ್ರೀ ಡಾ. ಖ.ವಿರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವ ಮೂಲಕ ನೂತನ ಜಿಲ್ಲಾ ಕಚೇರಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ 1982 ನೇ ಇಸವಿಯಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಮಾಭಿವೃದ್ಧಿ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆ ಎಲ್ಲಾ ಗ್ರಾಮಗಳಿಗೆ ಪಸರಿಸಿದೆ. ಪುತ್ತೂರಿನಲ್ಲಿ ಈಗಾಗಲೇ ಸುಮಾರು 13,000 ಸ್ವಾಸಹಾಯ ಸಂಘಗಳು ಇರುವ ಕಾರಣ ಎಲ್ಲಾ ಜನರ ಅನುಕೂಲಕ್ಕಾಗಿ ಸುವ್ಯವಸ್ಥಿತ ಅನುಕೂಲಕ್ಕಾಗಿ ಈ ಕೆಂದ್ರವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಪುತ್ತೂರು ಪುರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಇದರ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಎಲ್.ಹೆಚ್.ಮಂಜುನಾಥ್, ಖ್ಯಾತ ವೈದ್ಯರಾದ ಎಂ.ಕೆ.ಪ್ರಸಾದ್ ಬಂಡಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪತ್ತೂರು ಇದರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಹಾರ್ಪಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲಿಯಾನ್, ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಪುತ್ತೂರು ಇದರ ನಿರ್ದೇಶಕರಾದ ಪ್ರವೀಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.