ಪುತ್ತೂರು : ರಾಜ್ಯದಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡಿ ಹಲವಾರು ಜೀವಗಳು ಬಲಿಯಾಗಿವೆ, 2ನೇ ಅಲೆ ಬರುತ್ತಿರುವ ಅಪಾಯದ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಬಿಜೆಪಿ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷವಹಿಸಿರುವುದರಿಂದ ಜನರು ಅತೀವ ಸಂಕಷ್ಟ ಎದುರಿಸಬೇಕಾಯಿತು, ಸರಕಾರವು ಅವೈಜ್ಞಾನಿಕವಾಗಿ ಲಾಕ್ ಡೌನ್ ಹೇರಿದ್ದರಿಂದ ಜನಜೀವನ ಅಸ್ತವ್ಯಸ್ತ ವಾಯಿತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಬರಬೇಕಾದ ಸರಕಾರ ಪೊಳ್ಳು ಪರಿಹಾರದ ಘೋಷಣೆ ಮಾಡಿ ಜನರಿಗೆ ವಂಚನೆ ಮಾಡಿದೆ, ಇದಕ್ಕಾಗಿ ಕೆಪಿಸಿಸಿಯು ಕೊರೊನ ಸೋಂಕು ಪೀಡಿತರಿಗೆ ಹಾಗೂ ಸೋಂಕಿನಿಂದ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ದೊರಕಿಸುವ ಸದುದ್ದೇಶದಿಂದ ಸಹಾಯ ಹಸ್ತ ಎಂಬ ಕಾರ್ಯಕ್ರಮ ಹಮ್ಮಿ ಕೊಂಡಿದೆ ಎಂದು ಕೆಪಿಸಿಸಿಯ ವೀಕ್ಷಕರಾದ ಮಾಜಿ ಶಾಸಕಿ ಶ್ರೀಮತಿ ಗಾಯತ್ರಿ ಶಾಂತವೀರಪ್ಪ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಸಿ ಮಾತನಾಡುತ್ತಾ ನ್ಯಾಯಾಲಯದ ಆದೇಶದಂತೆ ರಾಜ್ಯ ಸರಕಾರ ಕೊರೊನಾ ಸೋಂಕಿತ ಕುಟುಂಬಗಳಿಗೆ ಕೇವಲ ಒಂದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ, ಪರಿಹಾರ ಹಣ ನೀಡುವರೇ ತಪ್ಪಿಸುವ ದುರುದ್ದೇಶದಿಂದ ಕೊರೊನ ಟೆಸ್ಟ್ ಕಮ್ಮಿ ಮಾಡಿ ಸೋಂಕಿತರ ಸಂಖ್ಯೆಯನ್ನು ಕಡಿಮೆ ತೋರಿಸುವ ಕೆಲಸ ಮಾಡುತ್ತಿದೆ ಹಾಗೂ ಕೊರೊನಾದಲ್ಲಿ ಮೃತ ಪಟ್ಟವರನ್ನು ಬೇರೆ ರೋಗದಲ್ಲಿ ಮೃತ ಪಟ್ಟವರೆಂದು ತೋರಿಸಿ ಮೃತರಿಗೆ ಪರಿಹಾರ ವಂಚಿಸುವ ಕೃತ್ಯ ನಡೆಸಿ ಜನರಿಗೆ ಮೋಸ ಮಾಡುತ್ತಿದೆ.
ಸರಕಾರದ ಈ ಮೋಸದ ನಡವಳಿಕೆಗೆ ವಿರುದ್ದವಾಗಿ ಹೋರಾಡಲು ಸೋಂಕಿನಿಂದ ಮೃತ ಪಟ್ಟವರ ಪಕ್ಕಾ ಮಾಹಿತಿ ಬೇಕಾಗಿದೆ. ಆದುದರಿಂದ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೊರೊನಾ ಸೋಂಕಿತರು ಹಾಗೂ ಅದರಿಂದ ಮೃತ ಪಟ್ಟವರ ಮಾಹಿತಿಯನ್ನು ಕಲೆ ಹಾಕಿ ವರದಿ ಮಾಡಬೇಕು. ಈ ವರದಿಯ ಅಂಕಿ ಅಂಶಗಳನ್ನು ಆಧಾರಿಸಿ ವಂಚಿತರಿಗೆ ಪರಿಹಾರ ಒದಗಿಸಲು ಸರಕಾರದ ವಿರುದ್ಧ ವಿಧಾನ ಸಭೆಯ ಒಳಗೂ, ಹೊರಗೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬಾಗವಹಿಸಿದ ಇನ್ನೋರ್ವ ವೀಕ್ಷಕಿ ಶ್ರೀಮತಿ ಸವಿತಾ ರಮೇಶ ರವರು ಮಾತನಾಡಿ ನಾನು ಈ ಹಿಂದೆನೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ವೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ, ಆಗಿನ ಗಿಂತಲೂ ಈಗಿನ ಬ್ಲಾಕ್ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿರುವ ಕೊಂಡಿರುವ ಬಗ್ಗೆ ಕೆಪಿಸಿಸಿಯ ಗಮನಕ್ಕೆ ಬಂದಿರುತ್ತದೆ.ಅತೀ ಹೆಚ್ಚು ಉತ್ಸಾಹದಲ್ಲಿ ಕೆಲಸ ಮಾಡುತ್ತಿರುವ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರು ಹಾಗೂ ಅವರ ತಂಡಕ್ಕೆ ಕೆಪಿಸಿಸಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿಯವರು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೊನ ಸಂದರ್ಭದಲ್ಲಿ ನಡಸಿದ ಪರಿಹಾರ ಕಾರ್ಯಕ್ರಮಗಳು ಹಾಗೂ ಪಕ್ಷ ನಡೆಸಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು
ಸಭೆಯ ಅಧ್ಯಕ್ಷತೆ ವಹಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರು ಪಕ್ಷದ ಬಲವರ್ದನೆ ಗೆ ಹಾಕಿ ಕೊಂಡಿರುವ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಪುತ್ತೂರು ಬ್ಲಾಕ್ ಯುವಕ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ ರವರು ವ್ಯಾಕ್ಸಿನ್ ಕೊರತೆಯ ಸಮಸ್ಯೆಯ ಬಗ್ಗೆ ತಿಳಿಸಿದರು,
ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕುಬು ದರ್ಬೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ಪೂರ್ಣೇಶ್ ಭಂಡಾರಿ, ಕಚೇರಿ ಕಾರ್ಯದರ್ಶಿ ಸಿರಿಲ್ ರೊಡ್ರಿಗಸ್, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಕೋವಿಡ್ ಸೇವಕ ಸಿಮ್ರಾನ್ ನಜೀರ್, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಸನಮ್ ನಜೀರ್, ರಾಜ್ಯ ಕೊಂಕಣಿ ಅಕಾಡಮಿಯ ಮಾಜಿ ಸದಸ್ಯ ದಾಮೋದರ ಭಂಡಾರ್ಕರ್,ಮಹಿಳಾ ಕಾಂಗ್ರೆಸ್ ನ ಶ್ರೀಮತಿ ಪ್ರತೀಕ , ಕಾಂಗ್ರೆಸ್ ಕಾರ್ಯಕರ್ತರಾದ ದಿನೇಶ್ ಕಾಮತ್, ಡೆನ್ನಿಸ್ ಕುತ್ತಿನ,ನಜಿರ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಲಾ ರಾಮಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.