ಮಂಗಳೂರು : ಹೆರಿಗೆ ವೇಳೆ ಅಧಿಕ ರಕ್ತಸ್ರಾವ ಕ್ಕೆ ಒಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಮಂಗಳೂರಿನ ಲೇಡಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ. ಕಡಬ ಕೊಂಬಾರು ಇಡ್ಯಡ್ಕ ಕಟ್ಟೆ ಚೇತನ್ ಎಂಬವರ ಪತ್ನಿ ವಿದ್ಯಾ (30) ಮೃತ ಮಹಿಳೆ.
ಮಂಗಳೂರಿನ ಲೇಡಿಗೋಷನ್ ಅಸ್ಪತ್ರೆಯಲ್ಲಿ ಅವಳಿ ಹೆರಿಗೆ ಆಗಿ ವಿಪರೀತ ರಕ್ತಸ್ರಾವದಿಂದ ಜು.14ರ ಮುಂಜಾನೆ ಮಹಿಳೆ ಮೃತಪಟ್ಟಿದ್ದಾರೆ.
ಮೊದಲು ಎರಡು ಹೆಣ್ಣು ಮಕ್ಕಳಿದ್ದು, ಈಗ ಎರಡು ಅವಳಿ ಹೆಣ್ಣು ಮಕ್ಕಳ ಜನನ ಸಂದರ್ಭ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿ ಮೃತಪಟ್ಟಿರುತ್ತಾರೆ.
ಮೃತರು ಚಾರ್ವಾಕ ಶಾಲಾ ಹಿರಿಯ ವಿದ್ಯಾರ್ಥಿನಿಯಾಗಿದ್ದು, ದೋಳ್ಪಾಡಿ ಇಡ್ಯಡ್ಕ ನಿವಾಸಿಯಾಗಿದ್ದ ವಿದ್ಯಾರನ್ನು ಪ್ರಗತಿಪರ ಕೃಷಿಕ ಕೊಂಬಾರಿನ ಇಡ್ಯಡ್ಕ ಕಟ್ಟ ಚೇತನ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು.
ಸೋದರ ಮಾವ ಆರ್.ಎಸ್.ಎಸ್ ನ ಪ್ರಮುಖರಾದ ನಾ.ಸೀತಾರಾಮ್ ಸುಳ್ಯ , ತಂದೆ ದೋಳ್ಪಾಡಿ ಗ್ರಾಮದ ಇಡ್ಯಡ್ಕ ಲಿಂಗಪ್ಪ ಗೌಡ, ತಾಯಿ, ತಮ್ಮ, ತಂಗಿ, ಪತಿ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.