ಮಂಗಳೂರು : ಮಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಗಾಳಿ -ಮಳೆಯ ನಡುವೆಯೂ ಇಂದು ಬೆಳ್ಳಂಬೆಳಗ್ಗೆ ಅಧಿಕಾರಿ ಮನೆ ಮೇಲೆ ಭ್ರಷ್ಟಾಚರ ನಿಗ್ರಹಣ ದಳದ ಪೊಲೀಸರು ದಾಳಿ ನಡೆಸಿದ್ದಾರೆ.
ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ.ಶ್ರೀಧರ್ ಮನೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆ ಪತ್ರಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಮಂಗಳೂರು ಎಸಿಬಿ ಎಸ್ಪಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು ನಗರದಲ್ಲಿರುವ ಶ್ರೀಧರ್ ಅವರ ಕಚೇರಿ, ಮೈಸೂರಿನಲ್ಲಿರೋ ಮನೆಗೂ ಎಸಿಬಿ ದಾಳಿ ನಡೆಸಿದ್ದು ವಿಚಾರಣೆ ಮತ್ತು ಪರಿಶೀಲನೆ ಮುಂದುವರೆಸಿದ್ದಾರೆ.