ಕಡಬ: ನಿಲ್ಲಿಸಿದ್ದ ಜೀಪ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಜೀಪ್ ಸಂಪೂರ್ಣ ಜಖಂಗೊಂಡ ಘಟನೆ ಕೊಂಬಾರು ಎಂಬಲ್ಲಿ ನಡೆದಿದೆ.
ಕಿರಣ್ ಎಂಬವರಿಗೆ ಸೇರಿದ ಟೂರಿಸ್ಟ್ ಜೀಪ್ ಮನೆ ಸಮೀಪ ನಿಲ್ಲಿಸಿದ್ದ ವೇಳೆ ಪಕ್ಕದ ಗುಡ್ಡದಲ್ಲಿ ಇದ್ದ ಬೃಹತ್ ಗಾತ್ರದ ಮರವೊಂದು ಜೀಪ್ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಜೀಪ್ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಜೀಪ್ ನಲ್ಲಿ ಯಾರೂ ಇಲ್ಲದೇ ಇರುವುದರಿಂದ ಪ್ರಾಣಾಪಾಯ ಸಂಭವಿಸಿಲ್ಲ.