ಪುತ್ತೂರು: ಗಾಂಧಿಕಟ್ಟೆಯ ಬಳಿಯ ಕೆ.ಎಸ್.ಆರ್.ಟಿ.ಸಿ ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಮದುಮಗಳ, ಮಹಿಳೆಯರ ಮತ್ತು ಮಕ್ಕಳ ಕಣ್ಮನ ಸೆಳೆಯುವ ಆಕರ್ಷಕ ಶೈಲಿಯ, ಡಿಸೈನ್ ಉಡುಪುಗಳ ಮಳಿಗೆ ‘ಮೋಹಿ ಡಿಸೈನರ್ ಬ್ಯುಟಿಕ್’ ಜು.೧೫ ರಂದು ಶುಭಾರಂಭಗೊಂಡಿತು. ಮಳಿಗೆಯ ಉದ್ಘಾಟನೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಜೆರೋಮ್ ಲಾರೆನ್ಸ್ ಮಸ್ಕರೇನಸ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮ್ಹಾಲಕ ಡಾ|ಮಹಮ್ಮದ್ ಇಬ್ರಾಹಿಂ ಪಾವೂರು, ನ್ಯಾಯವಾದಿಗಳಾದ ಮಹೇಶ್ ಕಜೆ, ದೀಪಿಕಾ, ಹರಿಣಾಕ್ಷಿ ಜೆ.ಶೆಟ್ಟಿ, ಸಾಹಿರಾ ಝುಬೇರ್, ಆರ್ಯಾಪು ಗ್ರಾ.ಪಂ ಸದಸ್ಯ ಹರೀಶ್ ನಾಯಕ್, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಟ್ಟಡದ ವ್ಯವ್ಥಾಪಕ ಮುದಸ್ಸಿರ್, ಎಪಿಎಂಸಿ ಸದಸ್ಯ ವಿ.ಎಚ್ ಅಬ್ದುಲ್ ಶಕೂರ್, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸದಸ್ಯ ನವೀನ್‌ಚಂದ್ರ ನಾಕ್, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಸಿಲ್ವೆಸ್ಟರ್ ಡಿ ಸೋಜ, ಇಸ್ಮಾಯಿಲ್ ಬೊಳುವಾರು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಪಾಲುದಾರರಾದ ಶ್ರಾವ್ಯ ಶೆಟ್ಟಿ, ವಿನೋದ್ ಶೆಟ್ಟಿ, ಶಿಲ್ಪಾ ಗಾಣಿಗ ಹಾಗೂ ನವೀನ್ ಕುಮಾರ್ ಉಪಸ್ಥಿತರಿದ್ದರು.
ನಗರದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ವಿಶಾಲ ಮಳಿಗೆಯನ್ನು ಹೊಂದಿದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸ, ಆಕರ್ಷಕ ವಿನ್ಯಾಸಗಳಲ್ಲಿ ಉಡುಪುಗಳು ದೊರೆಯಲಿದೆ. ಅನುಭವೀ ಸಿಬ್ಬಂದಿಗಳಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಡಿಸೈನ್‌ಗಳಲ್ಲಿ ಕ್ಲಪ್ತ ಸಮಯದಲ್ಲಿ ಹೊಲಿದು ಕೊಡಲಾಗುವುದು. ನಮ್ಮಲ್ಲಿ ಕಸ್ಟಮೈಸ್‌ಡ್ ಬ್ರೈಡಲ್ ಗೌನ್ಸ್, ಲೆಗ್ಗಿನ್ಸ್, ಮಹಿಳೆಯರ ಮತ್ತು ಮಕ್ಕಳ ಡಿಸೈನ್ ಉಡುಗೆಗಳು, ಮೆನ್ಸ್ ರೆಂಟಲ್ ಕಲೆಕ್ಷನ್ಸ್, ಸೆಮಿ ಸ್ಟಿಚ್ಡ್ ಲೆಗ್ಗಿನ್ಸ್, ಫ್ಯಾಬ್ರಿಕ್ ಸ್ಪಾಟ್, ಡಿಸೈನರ್ ಸ್ಟಿಚ್ಚಿಂಗ್, ಜ್ಯುವೆಲ್ಲರಿಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.