ಕೇರಳ: ಕೇರಳದಲ್ಲಿ ದಿನದಿಂದ ದಿನಕ್ಕೆ ಝಿಕಾ ವೈರಸ್ ಸೋಂಕುಪ್ರಕರಣ ಹೆಚ್ಚುತ್ತಿದೆ. ಮತ್ತೆ 5 ಮಂದಿಯಲ್ಲಿ ಝಿಕಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾದ ಝಿಕಾ ಸೋಂಕಿತರಲ್ಲಿ ಓರ್ವ ಪುರುಷ, ನಾಲ್ವರು ಮಹಿಳೆಯರಾಗಿದ್ದಾರೆ. ಅವರಲ್ಲಿ ಇಬ್ಬರು ತಿರುವನಂತಪುರಂನ ಅನಾಯಾರ ಮೂಲದವವರು ಎನ್ನಲಾಗಿದೆ.
ತಿರುವನಂತಪುರದಲ್ಲಿ ಝಿಕಾ ಹರಡುವಿಕೆ ಹೆಚ್ಚಾದ ಹಿನ್ನೆಲೆ ಜಿಲ್ಲಾ ವೈದ್ಯಕೀಯ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.