ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪುಗೆ ಹೋಗುವ ರಸ್ತೆ ಬದಿ ಗುಡ್ಡ ಕುಸಿದಿದ್ದು , ಹಾಗೂ ಹೋಮ್ ಗಾರ್ಡ್ ಸಂತೋಷ ಎಂಬವರ ಮನೆ ಪಕ್ಕದ ಗುಡ್ಡ ಕುಸಿದಿದ್ದು ಮನೆ ಬೀಳುವ ಅಪಾಯ ಉಂಟಾಗಿದೆ. ಈ ಸ್ಥಳಕ್ಕೆ ಮಾಜಿ ಶಾಸಕರಾದ ಶಕುಂತಲಾ ಟಿ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸದ್ರಿ ಅಪಾಯದ ಬಗ್ಗೆ ದ.ಕ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿ ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತೋಷ ರವರ ಜಾಗಕ್ಕೆ ತಡೆಗೋಡೆ ಕಟ್ಟುವುದಕ್ಕೆ ಅನುದಾನ ಮಂಜೂರು ಮಾಡುವಂತೆ ವಿನಂತಿ ಮಾಡಿದರು.
ಈ ಭೇಟಿ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಪೂರ್ಣೇಶ್ ಭಂಡಾರಿ, ಚಂದ್ರಶೇಕರ್ ಕಲ್ಲಗುಡ್ಡೆ, ವೇಣು ಗೋಪಾಲ ಮಣಿಯಾಣಿ ಬೊಳುವಾರು, ಶರತ್ ಮೊದಲಾದವರು ಉಪಸ್ಥಿತರಿದ್ದರು.