ರಾಮಕುಂಜ: ನಿವೃತ್ತ ಗ್ರಾಮ ಸಹಾಯಕ ದಿ.ಅಣ್ಣು ಗೌಡರ ಪುತ್ರ, ಹಳೆನೇರೆಂಕಿ ಗ್ರಾಮದ ಕೊಳಂಬೆ ದರ್ಖಾಸು ನಿವಾಸಿ, ಕೃಷಿಕ ಪುರುಷೋತ್ತಮ ಗೌಡ( 54ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜು.14ರಂದು ರಾತ್ರಿ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಒಂದು ತಿಂಗಳ ಹಿಂದೆ ಪುರುಷೋತ್ತಮ ಗೌಡರವರು ಮನೆಯಲ್ಲಿಯೇ ಇದ್ದ ವೇಳೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಕುಸಿದುಬಿದ್ದಿದ್ದರು. ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಳಿಕ ವೆನ್ಲಾಕ್ ನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಜು.14 ರಂದು ರಾತ್ರಿ ಅವರು ನಿಧನರಾಗಿದ್ದಾರೆ.
ಮೃತ ಪುರುಷೋತ್ತಮ ಗೌಡರವರು ಹಳೆನೇರೆಂಕಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಹಳೆನೇರೆಂಕಿ ನವಜೀವನ ಸಮಿತಿ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಳೆನೇರೆಂಕಿ ಒಕ್ಕೂಟದ ಅಧ್ಯಕ್ಷರಾಗಿ ಹಾಗೂ 5 ವರ್ಷ ಹಳೆನೇರೆಂಕಿ ಗ್ರಾಮದ ಸೇವಾಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಬಿಜೆಪಿ ಹಳೆನೇರಂಕಿ ಬೂತ್ ಸಮಿತಿ ಅಧ್ಯಕ್ಷರಾಗಿಯೂ ಇವರು ಕೆಲಸ ಮಾಡಿದ್ದರು. ವಿಷ್ಣುಮೂರ್ತಿ ಭಜನಾ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಗ್ರಾಮ ಭಜನಾ ಕಾರ್ಯಕ್ರಮದಲ್ಲಿ ಪುರುಷೋತ್ತಮ ಗೌಡರವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಮೃತರು ಪತ್ನಿ ವಿದ್ಯಾ, ಪುತ್ರ ಸನತ್, ಪುತ್ರಿ ಸಂಧ್ಯಾರವರನ್ನು ಅಗಲಿದ್ದಾರೆ.