ನೆಲ್ಯಾಡಿ : ಮಹಾಮಾರಿ ಕೋವಿಡ್ ಗೆ ಪತಿ ಹಾಗೂ ಪತ್ನಿ ಒಂದೇ ದಿನ ಮೃತ ಪಟ್ಟಿರುವ ಘಟನೆ ನೆಲ್ಯಾಡಿ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪುನ್ನತ್ ನಾಥ್ ನಿವಾಸಿ ,ಕೃಷಿಕ ವಗೀ೯ಸ್ ಪಿ. ವಿ. (74ವ.) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ ಪಿ. ವಿ. (73ವ.) ಮೃತ ಪಟ್ಟ ದುದೈ೯ವಿಗಳಾಗಿದ್ದಾರೆ.
ಇಬ್ಬರಿಗೂ ಜೂ. 25 ರಂದು ಜ್ವರ ಬಂದಿದ್ದು ಔಷಧಿ ಪಡೆದು ಗುಣಮುಖರಾಗಿದ್ದರು. ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಅವರಿಗೆ ಜು. 4ರಂದು ಮೊದಲು ಮಂಗಳೂರಿನ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಅವರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರ ಪೈಕಿ ಜು. 15ರಂದು ಮಧ್ಯಾಹ್ನ 1.30 ರ ವೇಳೆಗೆ ಮೇರಿ ವಗೀ೯ಸ್ ರವರು ನಿಧನರಾಗಿದ್ದು ಸಂಜೆ 7 ಗಂಟೆ ವೇಳೆಗೆ ವಗೀ೯ಸ್ ಪಿ, ವಿ. ಯವರು ನಿಧನರಾದರು. ಮೃತರು ಪುತ್ರರಾದ ಬೆಳ್ತಂಗಡಿ ಮುಂಡಾಜೆ ಚಚ್೯ನ ಧಮ೯ಗುರು ರೆ. ಫಾ. ಸೆಬಾಸ್ಟಿನ್, ಸುರೇಶ್ ಜಾಜ್೯,ಪುತ್ರಿಯರಾದ ಲವ್ಲೀ, ದೀಪ್ತಿ ಯವರನ್ನು ಆಗಿದ್ದಾರೆ.
ಇಬ್ಬರ ಮೃತ ದೇಹದ ಅಂತ್ಯಕ್ರಿಯೆ ಜು. 16ರಂದು ನೆಲ್ಯಾಡಿ ಸಂತ ಅಲ್ಫೋನ್ಸ್ ಚಚ್೯ನಲ್ಲಿ ಕೋವಿಡ್ ನಿಯಮಾವಳಿಯಂತೆ ನಡೆಯಿತು. ಬೆಳ್ತಂಗಡಿ ಧಮ೯ಪ್ರಾಂತ್ಯದ ಬಿಷಫ್ ವಂದನೀಯ ಲಾರೆನ್ಸ್ ಮುಕುಝಿ, ನೆಲ್ಯಾಡಿ ಸಂತ ಅಲ್ಫೋನ್ಸ್ ಚಚ್೯ನ ಧಮ೯ಗುರು ರೆ. ಫಾ. ಬಿನೋಯ್, ಸಹಾಯಕ ಧಮ೯ಗುರು ರೆ. ಫಾ. ನೊಬೆಲ್ ರವರು ವಿಧಿವಿಧಾನ ನೆರವೇರಿಸಿದರು.