ಕಳೆದ ವರ್ಷದಂತೆ ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳ ಆಚರಣೆಗೆ ಚ್ಯುತಿ ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಲು ಮನವಿ ವಿಶ್ವ ಹಿಂದು ಪರಿಷದ್ ಮನವಿ ಮಾಡಿದೆ.
ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ (ವಿಟ್ಲಾ ಪಿಂಡಿ), ಗಣೇಶ ಚತುರ್ಥಿ ಹಬ್ಬಗಳ ಇತ್ಯಾದಿಯಾಗಿ ದೇವಸ್ಥಾನಗಳಲ್ಲಿ, ಸಾರ್ವಜನಿಕವಾಗಿ ನಡೆಸುವ ಆಚರಣೆಗಳನ್ನು ಕಳೆದ ವರ್ಷದಂತೆ ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ಆಚರಿಸಲು ತಕ್ಷಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕೆಂದು ಮಾನ್ಯ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿಶ್ವಹಿಂದೂ ಪರಿಷದ್ ಪರಿಷತ್ ಮನವಿ ಮಾಡಿತು, ಪ್ರೊ ಎಂ ಬಿ ಪುರಾಣಿಕ್, ಗೋಪಾಲ್ ಕುತ್ತಾರ್, ಶರಣ್ ಪಂಪವೆಲ್, ಶಿವಾನಂದ್ ಮೆಂಡನ್ ಹಾಗು ಜಿಲ್ಲಾ ಪ್ರಮುಖರು ಈ ಸಂಧರ್ಭದಲ್ಲಿ ಉಪಸ್ಥಿತಿ ಇದ್ದರು