ಪುತ್ತೂರು:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಕ್ರೀಡಾ ಭಾರತಿ ಪುತ್ತೂರು ಮತ್ತು ವಿದ್ಯಾಮಾತಾ ಅಕಾಡೆಮಿ ಇವುಗಳ ಸಹಯೋಗದಲ್ಲಿ ಸಬ್ ಇನ್ಸ್ ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ಹುದ್ದೆಯ ನೇಮಕಾತಿ ಪರೀಕ್ಷೆಯ ಪೂರ್ವ ತಯಾರಿ ಕುರಿತು ಉಚಿತ ಮಾಹಿತಿ ಕಾರ್ಯಗಾರ ಜು.18ರಂದು ಬಂಟರ ಭವನದಲ್ಲಿ ನಡೆಯಿತು.
ಸಾಹಿತಿ ಸುಬ್ರಾಯ ಚೊಕ್ಕಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅರವಿಂದ ಚೊಕ್ಕಾಡಿ ಅವರ ‘ಸ್ಪರ್ದಾತ್ಮಕ ಪರೀಕ್ಷೆಗಳ ಮಾಹಿತಿ’ ಪುಸ್ತಕ ಬಿಡುಗಡೆಗೊಂಡಿತು.
ವೇದಿಕೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ ಮುಖ್ಯಸ್ಥ ಭಾಗ್ಯೇಶ್ ರೈ ಯುವಜನ ಮತ್ತು ಕ್ರೀಡಾ ಅಧಿಕಾರಿ ರಾಮಕೃಷ್ಣ, ಕ್ರೀಡಾ ಭಾರತಿ ಉಪಾಧ್ಯಕ್ಷ ಅನಿಲ್ ತೆಂಕಿಲ, ಕ್ರೀಡಾ ಭಾರತಿ ಕಾರ್ಯದರ್ಶಿ ದಾಮೋದರ, ಕಾರ್ಯದರ್ಶಿ ದೇವಿಪ್ರಕಾಶ್, ತರಬೇತುದಾರರಾದ ಕಾರ್ತಿಕ್,ರಮ್ಯಾ ಭಾಗ್ಯೇಶ್ ರೈ ವಿದ್ಯಾವತಿ ಜೈನ್,ಚಂದ್ರಶೇಖರ ರಾವ್, ವಿಜೇತ, ಕುಸುಮಾವತಿ, ಹರ್ಷಿತಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ
ಬಳಿಕ ಮಾಹಿತಿ ಕಾರ್ಯಗಾರ ನಡೆಯಿತು.