ಬಂಟ್ವಾಳ : ಅಕ್ರಮವಾಗಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜು.17 ರಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮವಾಗಿ ಗಾಂಜಾ ಶೇಖರಿಸಿ ವಿತರಣೆ ಮಾಡುತ್ತಿದ್ದ ಮತ್ತು ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ನಿಗಾ ಇಡಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಉಪಾಧೀಕ್ಷಕರು ಹಾಗೂ ಬಂಟ್ವಾಳ ಉಪವಿಭಾಗ ರವರ ನಿರ್ದೇಶನದಂತೆ ಬಂಟ್ವಾಳ ತಾಲೂಕಿನಲ್ಲಿ ಅಕ್ರಮ ಗಾಂಜಾ ಪತ್ತೆ ಹಚ್ಚಲು ತಂಡವನ್ನು ರಚಿಸಿ, ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಅಕ್ರಮವಾಗಿ ಸುಮಾರು 30,000/- ಮೌಲ್ಯದ 1 ಕೆ.ಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯಾದ ಇಕ್ಬಾಲ್ (ಕಡ್ಲೆ ಇಕ್ಬಾಲ್) ನನ್ನು ಬಂಧಿಸಲಾಗಿದೆ.

ಪ್ರಕರಣದ ಸಹ ಆರೋಪಿಗಳಾದ ಸಜೀಪನಡುವಿನ ಎಸ್.ಕೆ ರಫೀಕ್ ಮತ್ತು ಕಂಚಿನಡ್ಕ ಪದವಿನ ಮೋನು(ಪಿಲಿ ಮೋನು) ತಲೆಮರೆಸಿಕೊಂಡಿದ್ದು, ಪ್ರಕರಣವು ಠಾಣೆಯಲ್ಲಿ ಅ.ಕ್ರ 77/2021 ರಂತೆ ದಾಖಲಾಗಿದೆ.ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಶೇಷ ತಂಡದ ಸದಸ್ಯರಾದ ಉದಯ ರವಿ, ಜನಾರ್ಧನ, ಸುರೇಶ್, ಪ್ರವೀಣ್, ಗೋಣಿಬಸಪ್ಪ, ಇರ್ಷಾದ್, ವಿವೇಕ್, ಕುಮಾರ್ ರವರ ತಂಡ ಪಾಲ್ಗೊಂಡಿದ್ದರು.