ವಿಟ್ಲ : ಹೋಬಳಿ ವ್ಯಾಪ್ತಿಯ ಹಲವೆಡೆ ಮಳೆಗೆ ಭಾರೀ ಹಾನಿ ಸಂಭವಿಸಿದೆ. ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಗಾಳಿ ಮಳೆಗೆ ನೇಮಕ್ಕುರವರ ಮನೆಯ ಮೇಲಿನ ಬರೆ (ಅವರಣ ಗೋಡೆ) ಕುಸಿದು ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ಯಾಕುಬು ಮತ್ತು ಗ್ರಾಮಕರಣಿಕ ಕರಿಬಸಪ್ಪ ಆಗಮಿಸಿ ಪರಿಶೀಲಿಸಿದರು.
ಬೋಳಂತೂರು ಗ್ರಾಮದ ಅಬ್ದುಲ್ ಖಾದ್ರಿ ಅವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದಿದೆ. ಚೆನ್ನಪ್ಪ ಪೂಜಾರಿ ಅವರ ಮನೆಯ ಹಿಂಭಾಗದಲ್ಲಿರುವ ತೋಡಿಗೆ ಕಟ್ಟಲಾದ ತಡೆಗೋಡೆ ಕುಸಿದು ಬಿದ್ದಿದ್ದು, ಮನೆ ಅಪಾಯದಲ್ಲಿದ್ದು, ಮನೆಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಗುಂಡಿಮಜಲು ವಿಶ್ವನಾಥ ಭಟ್ ಅವರ ಮನೆಯ ಪಕ್ಕದ ಗುಡ್ಡ ಕುಸಿದಿದೆ. ಬೋಳಂತೂರು ಗುತ್ತು ಸೀತಾರಾಮ ಅವರ ಮನೆಯ ಪಕ್ಕದ ತೋಡಿನ ತಡೆಗೋಡೆ ಕುಸಿದು ಅಪಾಯದಲ್ಲಿದೆ.
ವೀರಕಂಬ-ಬೋಳಂತೂರು ಸಂಪರ್ಕಿಸುವ ರಸ್ತೆಯ ತಡೆಗೋಡೆ ತೋಡಿನ ಪಾಲಾಗಿದ್ದು, ರಸ್ತೆ ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿದೆ.