ಪುತ್ತೂರು: ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಕಲ್ಲುರ್ಟಿ ದೈವಕ್ಕೆ ಭೆಳ್ಳಿಯ ಆಭರಣ ಸಮರ್ಪಣೆ ಮಾಡಿದ ಘಟನೆ ಪರಶುರಾಮ ಸೃಷ್ಟಿಯ ದೈವಾರಾಧನೆಗೆ ಹೆಸರುವಾಗಿರುವ ಇತಿಹಾಸ ಪ್ರಸಿದ್ಧ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆದಿದೆ.
ಗಣೇಶ್ ಬಾಗಿನ ಸಾವಿತ್ರಿ ಎಂಬವರು ದೈವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದಂತೆ ತನ್ನ ಇಷ್ಟಾರ್ಥ ಈಡೇರಿದಾಗ ಕಲ್ಲುರ್ಟಿ ದೈವಕ್ಕೆ ಬೆಳ್ಳಿಯ ಆಭರಣವನ್ನು ಹರಕೆ ರೂಪದಲ್ಲಿ ದೈವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್ ಮನೋಹರ್, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ, ಮಾದವ ಪಟ್ಲ, ರವಿಕಿರಣ್, ಪ್ರಶಾಂತ್ ಮತ್ತು ಸ್ಥಳೀಯರಾದ ಕಿರಣ್, ನೀತೇಶ್, ವಸಂತ ನೆಲಪ್ಪಾಲ್, ಚಂದ್ರಶೇಖರ ಕಲ್ಲೇಗ ಉಪಸ್ಥಿತರಿದ್ದರು.