ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ಪತಿ ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ.
ಮಚ್ಚಿನ ಗ್ರಾಮದ ಮುಡಿಪಿರೆ ನಿವಾಸಿ (53) ಆತ್ಮಹತ್ಯೆಗೆ ಶರಣಾದವರು.ಶಿವಪ್ಪ ಅವರ ಪತ್ನಿ ಚಂದ್ರಾವತಿ (49) ಅವರು ಹುಲ್ಲು ತರಲೆಂದು ಮನೆಯಿಂದ ಹೊರಗೆ ಹೋದವರು ಮನೆಯ ಸಮೀಪದಲ್ಲಿದ್ದ ಮರಕ್ಕೆ ಜು.16ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಪತ್ನಿಯ ಶವಸಂಸ್ಕಾರಕ್ಕಾಗಿ ಶಾಮಿಯಾನ ಹಾಕಲಾಗಿತ್ತು.
ಜುಲೈ 17ರ ಮಧ್ಯರಾತ್ರಿ ಶಿವಪ್ಪ ಅವರು ಶಾಮಿಯಾನದ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಶಿವಪ್ಪ ಅವರು ಚಂದ್ರಾವತಿ ಅವರನ್ನು ವಿವಾಹವಾಗಿ ಕಳೆದ ಎಂಟು ವರ್ಷಗಳಿಂದ ಮುಡಿಪಿರೆಯಲ್ಲಿ ವಾಸಿಸುತ್ತಿದ್ದರು.
ಮಕ್ಕಳಾಗದೇ ಇದ್ದುದ್ದರಿಂದ ಮನನೊಂದು ಚಂದ್ರಾವತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನಿಂದ ನೊಂದ ಪತಿ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಘಟನೆಯ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.