ಪುತ್ತೂರು : ಕಬಕ ಶ್ರೀರಾಮ ಲೇಔಟ್ ನಿವಾಸಿಯಾಗಿರುವ ಸದಾಶಿವ ರಾವ್ ದಾಳಿಂಬ ರವರು ಜು.19 ರಂದು ಕೋವಿಡ್ ನಿಂದಾಗಿ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ವಾರ ಕೋವಿಡ್ ಸೋಂಕಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾದ ಅವರು ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ನಿನ್ನೆ ಆರೋಗ್ಯ ದಲ್ಲಿ ಏರುಪೇರಾಗಿ ಇಂದು ನುಸುಕಿನ ವೇಳೆ ಕೊನೆಯುಸಿರೆಳೆದಿದ್ದಾರೆ.
ಸದಾಶಿವ ರವರು ಅನೇಕ ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. ಕಾಣಿಯೂರು ನಲ್ಲಿ ಸುಮಾರು 30 ವರ್ಷ ಹೋಟೆಲ್ ಪರಿಮಳ ನಡೆಸುತ್ತಿದ್ದರು, ನಂತರ 2 ವರ್ಷ ಪುತ್ತೂರಿನ ಮುರದಲ್ಲಿ ಹೋಟೆಲ್ ಮಾಡಿ ಪ್ರಸ್ತುತ ವಿಶ್ರಾಂತಿ ಜೀವನದಲ್ಲಿದ್ದರು.
ಮೃತರು ಪತ್ನಿ ರಾಜಲಕ್ಷ್ಮಿ, ಮಗ ಗಣೇಶ್, ಮಗಳು ಪರಿಮಳ ಸಹಿತ ಐದು ಜನ ಸಹೋದರ ರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ವನ್ನು ಹಿಂದೂ ಮುಖಂಡ ಅರುಣ್ ಪುತ್ತಿಲ ನೇತೃತ್ವದಲ್ಲಿ ಬಂಟ್ವಾಳ ಸೇವಾಭಾರತಿ ತಂಡದ ಪ್ರಶಾಂತ್ ಕೆಂಪುಗುಡ್ಡೆ, ನರಸಿಂಹ ಶೆಟ್ಟಿ ಮಾಣಿ, ಶರತ್ ಅಮೈ, ಸಂತೋಷ ಕುರಿಯಾಳ ಹಾಗೂ ಮೃತರ ಮಗ ಗಣೇಶ್ ಕೋವಿಡ್ ನಿಯಮಾವಳಿಯಂತೆ ಪಿಪಿಇ ಕಿಟ್ ಧರಿಸಿ ನೆರವೇರಿಸಿದರು