ಪುತ್ತೂರು : ಜಾಗದ ವಿಚಾರವಾಗಿ ಮನಸ್ತಾಪ ಹಿನ್ನಲೆ ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಿಯಡ್ಕ ನಿವಾಸಿ ಅರುಣ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ನಾಗೇಶ್ ಹಾಗೂ ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅರುಣ್ ಕುಮಾರ್ ಅವರು ಕೃಷಿ ಕೆಲಸ ಮಾಡುತ್ತಿದ್ದು, ಅರುಣ್ ಹಾಗೂ ಮನೆಯ ನೆರೆಯ ಸಂಬಂಧಿಕರಾದ ನಾಗೇಶ್ ಮಣಿಯಾಣಿ ರವರ ಮಧ್ಯೆ ಜಾಗದ ವಿಚಾರದಲ್ಲಿ ಮನಸ್ತಾಪವಿದ್ದು, ಜು.24 ರಂದು ಅರುಣ್ ಅವರಿಗೆ ಸೇರಿದ ಜಾಗದಲ್ಲಿ ಹಲಸಿನ ಹಣ್ಣನ್ನು ತೆಗೆಯುತ್ತಿರುವಾಗ ನಾಗೇಶ್ ಮತ್ತು ಅವರ ಹೆಂಡತಿ ಬಂದು ಅರುಣ್ ಮತ್ತು ಅವರ ತಾಯಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಅರುಣ್ ಅವರಿಗೆ ಹಲ್ಲೆ ನಡೆಸಿರುತ್ತಾರೆ.
ಅರುಣ್ ತಾಯಿ ಗಲಾಟೆಯನ್ನು ಬಿಡಿಸಿದ್ದು, ನಾಗೇಶ್ ಮಣಿಯಾಣಿ ಅರುಣ್ ರನ್ನು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 85/2024, ಕಲಂ:-352,118(1),115(2),351(2) ಜೊತೆಗೆ 3(5) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.